ADVERTISEMENT

ಶ್ರವಣದೋಷವುಳ್ಳವರ ಶೂಟಿಂಗ್ ವಿಶ್ವಕಪ್: ಮಹಿತ್ ಸಂಧುಗೆ ಚಿನ್ನ

ಪಿಟಿಐ
Published 5 ಸೆಪ್ಟೆಂಬರ್ 2024, 20:24 IST
Last Updated 5 ಸೆಪ್ಟೆಂಬರ್ 2024, 20:24 IST
<div class="paragraphs"><p>ಶ್ರವಣದೋಷವುಳ್ಳವರ ಶೂಟಿಂಗ್ ವಿಶ್ವಕಪ್:</p><p> ಮಹಿತ್ ಸಂಧುಗೆ ಚಿನ್ನ</p></div>

ಶ್ರವಣದೋಷವುಳ್ಳವರ ಶೂಟಿಂಗ್ ವಿಶ್ವಕಪ್:

ಮಹಿತ್ ಸಂಧುಗೆ ಚಿನ್ನ

   

( ಚಿತ್ರ ಕೃಪೆ–X/@Media_SAI)

ADVERTISEMENT

ನವದೆಹಲಿ: ಭಾರತದ ಮಹಿತ ಸಂಧು ಅವರು ಜರ್ಮನಿಯ ಹಾನೊವೆರ್‌ನಲ್ಲಿ ನಡೆಯುತ್ತಿರುವ ಶ್ರವಣದೋಷವುಳ್ಳವರ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀ ರೈಫಲ್ ಪ್ರಾನ್ ವಿಭಾಗದಲ್ಲಿ ಚಿನ್ನ ಗೆದ್ದರು. 

ಪುರುಷರ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಅಭಿನವ್ ದೇಶ್ವಾಲ್ ಬೆಳ್ಳಿ ಗಳಿಸಿದರು. 

ಈ ಎರಡು ಸಾಧನೆಗಳೊಂದಿಗೆ ಭಾರತವು ಇಲ್ಲಿ ಗೆದ್ದ ಪದಕಗಳ ಸಂಖ್ಯೆಯು 15ಕ್ಕೇರಿದೆ. ಇದರಲ್ಲಿ ನಾಲ್ಕು ಚಿನ್ನ, ಏಳು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.