ADVERTISEMENT

ಬಾಕ್ಸಿಂಗ್‌: ಸೆಮಿಗೆ ಮೇರಿ

ಪಿಟಿಐ
Published 21 ಮೇ 2019, 19:09 IST
Last Updated 21 ಮೇ 2019, 19:09 IST
ಮೇರಿ ಕೋಮ್‌
ಮೇರಿ ಕೋಮ್‌   

ಗುವಾಹಟಿ: ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ.ಮೇರಿ ಕೋಮ್‌ ಅವರು ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಕರಮ್‌ವೀರ್‌ ನಬೀನ್ ಚಂದ್ರ ಬೋರ್ದೊಲಾಯ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಮೇರಿ 5–0ಯಿಂದ ನೇ‍ಪಾಳದ ಮಾಲಾ ರಾಯ್‌ ಅವರನ್ನು ಪರಾಭವಗೊಳಿಸಿದರು.

ಇದೇ ಮೊದಲ ಸಲ 51 ಕೆ.ಜಿ. ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಮೇರಿ, ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ಹೈರಾಣಾಗಿಸಿದರು.

ADVERTISEMENT

60 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಸರಿತಾ ದೇವಿ ಕೂಡಾ ನಾಲ್ಕರ ಘಟ್ಟ ಪ್ರವೇಶಿಸಿದರು. ಸರಿತಾ 5–0ಯಿಂದ ಪ್ರೀತಿ ಬೇನಿವಾಲಾ ಅವರನ್ನು ಸೋಲಿಸಿದರು.

ಸ್ಥಳೀಯ ಆಟಗಾರ್ತಿ ಅಂಕುಶಿತಾ ಬೋರೊ 64 ಕೆ.ಜಿ. ವಿಭಾಗದ ಪಂದ್ಯದಲ್ಲಿ 4–1ಯಿಂದ ಲಲಿತಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.