ಬೆಂಗಳೂರು: ರಾಜ್ಯದ ದಾನಮ್ಮ ಚಿಚಖಂಡಿ ಮತ್ತು ವೆಂಕಪ್ಪ ಕೆಂಗಲಗುತ್ತಿ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ ಏಷ್ಯಾಕಪ್ ಸೈಕ್ಲಿಂಗ್‌ನಲ್ಲಿ ಶನಿವಾರ ಮಿಂಚಿದರು. ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದು ಗಮನ ಸೆಳೆದರು.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದ ವೆಲೊಡ್ರೋಮ್‌ನಲ್ಲಿ ನಡೆದ ಮಹಿಳೆಯರ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ದಾನಮ್ಮ ಬೆಳ್ಳಿಯ ಸಾಧನೆ ಮಾಡಿದರು. ವೆಂಕಪ್ಪ ಪುರುಷರ ವಿಭಾಗದ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು. ಮೊದಲ ದಿನವಾದ ಗುರುವಾರ ಜೂನಿಯರ್ ವಿಭಾಗದ 15 ಮೀಟರ್ಸ್ ಪಾಯಿಂಟ್ ರೇಸ್‌ನಲ್ಲಿ ಕೂಡ ವೆಂಕಪ್ಪ ಕಂಚಿನ ಪದಕ ಗಳಿಸಿದ್ದರು.
ಬಾಗಲಕೋಟೆ ಜಿಲ್ಲೆಯವರಾದ ವೆಂಕಪ್ಪ ಮತ್ತು ದಾನಮ್ಮ ನವದೆಹಲಿಯ ಸಾಯಿನಿಕಾದಲ್ಲಿ (ಸಾಯಿ ನ್ಯಾಷನಲ್ ಸೈಕ್ಲಿಂಗ್ ಅಕಾಡೆಮಿ) ತರಬೇತಿ ಪಡೆಯುತ್ತಿದ್ದಾರೆ. ಬಾಗಲಕೋಟೆ ಸೈಕ್ಲಿಂಗ್ ಕ್ರೀಡಾನಿಲಯದಲ್ಲಿ ಈ ಹಿಂದೆ ತರಬೇತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.