ಮುಂಬೈ: ಭಾರತದ ಲಲಿತ್ ಬಾಬು ಮತ್ತು ನೀಲೋತ್ಪಲ್ ದಾಸ್ ಅವರು ಮುಂಬೈ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಎಂಟನೇ ಸುತ್ತಿನಲ್ಲಿ ಸ್ಫೂರ್ತಿಯುತ ಗೆಲುವು ಸಾಧಿಸಿದರು. ಮಂಗಳವಾರದ ಕೊನೆಗೆ ಅರ್ಮೆನಿಯಾದ ಘರಿಬ್ಯಾನ್ ಮಮಿಕಾನ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಈ ಮೂವರೂ ಏಳು ಪಾಯಿಂಟ್ಸ್ ಗಳಿಸಿದ್ದಾರೆ.
ಬಿಳಿ ಕಾಯಿಗಳಲ್ಲಿ ಆಡಿದ ಬಾಬು ಅವರು ಎಂಟನೇ ಸುತ್ತಿನಲ್ಲಿ ಬೆಲರೂಸ್‌ನ ಗ್ರ್ಯಾಂಡ್‌ಮಾಸ್ಟರ್ ಅಲೆಕ್ಸಿ ಫೆಡೊರೊವ್ ಅವರನ್ನು 39 ನಡೆಗಳಲ್ಲಿ ಸೋಲಿಸಿದರು. ನೀಲೋತ್ಪಲ್ ಇನ್ನೊಂದು ಪಂದ್ಯದಲ್ಲಿ ಅರ್ಮೇನಿಯಾದ ಅರ್ಸೆನ್ ದವಟ್ಯಾನ್ ಅವರನ್ನು ಮಣಿಸಿದರು.
ಮಮಿಕಾನ್ ಅವರು ದಿನದ ಅನಿರೀಕ್ಷಿತ ಫಲಿತಾಂಶದಲ್ಲಿ, ಸೋಮವಾರದವರೆಗೆ ಮುನ್ನಡೆ
ಯಲ್ಲಿದ್ದ ಜಿಎಂ ಅಲೆಕ್ಸೆಜ್ ಅಲೆಕ್ಸಾಂಡ್ರೋವ್ ಅವರನ್ನು ಸೋಲಿಸಿದರು.
9 ಮಂದಿ ಆಟಗಾರರು ತಲಾ 6.5 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಇವರಲ್ಲಿ ಅಲೆಕ್ಸಾಂಡ್ರೋವ್, ಲೆವೊನ್ ಪೆಂಟ್ಸುಲಾಯಿಯ, ಮ್ಯಾನುವೆಲ್ ಪೆಟ್ರೊಸಿಯಾನ್ ಮತ್ತು ದೀಪನ್ ಚಕ್ರವರ್ತಿ ಒಳಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.