ADVERTISEMENT

ಮುಂಬೈ ಮ್ಯಾರಥಾನ್‌: ನಿತೇಂದರ್‌, ಸುಧಾಗೆ ಚಿನ್ನ

ಪಿಟಿಐ
Published 20 ಜನವರಿ 2019, 18:33 IST
Last Updated 20 ಜನವರಿ 2019, 18:33 IST

ಮುಂಬೈ: ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದ ಸುಧಾ ಸಿಂಗ್‌ ಹಾಗೂ ನಿತೇಂದರ್‌ ಸಿಂಗ್‌ ರಾವತ್‌ ಅವರು ಮುಂಬೈ ಮ್ಯಾರಥಾನ್‌ನ ಭಾರತದ ಸ್ಪರ್ಧಿಗಳ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಭಾನುವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಸುಧಾ, ಎರಡು ಗಂಟೆ 34 ನಿಮಿಷ 56 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಜ್ಯೋತಿ ಗಾವಟೆ (2:45:48ಸೆ.) ಮತ್ತು ಜಿಗಮತ್‌ ದೊಲ್ಮಾ (3:10:42ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ADVERTISEMENT

ಪುರುಷರ ವಿಭಾಗದಲ್ಲಿ ನಿತೇಂದರ್‌, ಎರಡು ಗಂಟೆ 15 ನಿಮಿಷ 12 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಟಿ. ಗೋಪಿ (2:17:03ಸೆ.) ಬೆಳ್ಳಿಯ ಪದಕ ಗೆದ್ದರೆ, ಕರಣ್‌ ಸಿಂಗ್‌ (2:20:10ಸೆ.) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.