
ಪ್ರಜಾವಾಣಿ ವಾರ್ತೆ
ಬೆಂಗಳೂರು: ರಾಜ್ಯ ಈಜು ಸಂಸ್ಥೆಯ ಕಚೇರಿಯಲ್ಲಿ ದಶಕಗಳಿಂದ ಸೇವೆ ಸಲ್ಲಿಸಿರುವ ಸಿಬ್ಬಂದಿ ನಾಗೇಶ ರಾವ್ ಚವ್ಹಾಣ್ (63) ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಒಬ್ಬ ಪುತ್ರಿ ಇದ್ದಾರೆ. ಬೆಂಗಳೂರಿನ ಶ್ರೀನಗರದ ಅಂಬಾಭವಾನಿ ನಗರ ನಿವಾಸಿಯಾಗಿದ್ದ ಅವರು 1986ರಲ್ಲಿ ರಾಜ್ಯ ಈಜು ಸಂಸ್ಥೆ ಮತ್ತು ಬಸವನಗುಡಿ ಈಜು ಕೇಂದ್ರವನ್ನು ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.