ADVERTISEMENT

ರಾಷ್ಟ್ರೀಯ ರ‍್ಯಾಂಕಿಂಗ್ ಆರ್ಚರಿ ಏಪ್ರಿಲ್‌ನಲ್ಲಿ

ಪಿಟಿಐ
Published 14 ಫೆಬ್ರುವರಿ 2019, 16:56 IST
Last Updated 14 ಫೆಬ್ರುವರಿ 2019, 16:56 IST
ಆರ್ಚರಿ
ಆರ್ಚರಿ   

ಭೋಪಾಲ್‌ : ಈ ಬಾರಿಯ ರಾಷ್ಟ್ರೀಯ ರ‍್ಯಾಂಕಿಂಗ್‌ ಆರ್ಚರಿ ಟೂರ್ನಿಗೆ ನವದೆಹಲಿ ಆತಿಥ್ಯ ವಹಿಸಲಿದೆ. ಏಪ್ರಿಲ್‌ 15ರಿಂದ 19ರ ವರೆಗೆ ಟೂರ್ನಿ ನಡೆಯಲಿದ್ದು ಅದೇ ತಿಂಗಳ ಕೊನೆಯಲ್ಲಿ ಕೊಲಂಬಿಯಾದ ಮೆಡಿಲಿನ್‌ನಲ್ಲಿ ವಿಶ್ವಕಪ್‌ ಆರ್ಚರಿ ನಡೆಯಲಿರುವುದರಿಂದ ಈ ಟೂರ್ನಿ ಮಹತ್ವದ್ದಾಗಿದೆ.

ಗುರುವಾರ ನಡೆದ ಆರ್ಚರಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಅಧ್ಯಕ್ಷ ಬಿ.ವಿ.ಪಿ ರಾವ್‌ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಈ ತಿಂಗಳು ಢಾಕಾದಲ್ಲಿ ನಡೆಯಲಿರುವ ವಿಶ್ವ ರ‍್ಯಾಂಕಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಈ ಬಾರಿಯ ಕೆಡೆಟ್ ವಿಭಾಗದವರು ಕೂಡ ಪಾಲ್ಗೊಳ್ಳಲಿದ್ದು ಮುಂದಿನ ತಿಂಗಳು ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಜೂನಿಯರ್ ವಿಭಾಗವನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ADVERTISEMENT

ಖೇಲೊ ಇಂಡಿಯಾದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಕೆಡೆಟ್‌ ವಿಭಾಗದ ತಂಡಕ್ಕೆ ಆರಿಸಲಾಗುವುದು. ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದವರನ್ನು ಜೂನಿಯರ್ ವಿಭಾಗದ ಚಾಂಪಿಯನ್‌ಷಿಪ್‌ಗೆ ಪರಿಗಣಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.