ADVERTISEMENT

ಮಹಿಳಾ ರಾಷ್ಟ್ರೀಯ ಕುಸ್ತಿ ಶಿಬಿರ ಅಕ್ಟೋಬರ್‌ 10ರಿಂದ

ಪಿಟಿಐ
Published 29 ಸೆಪ್ಟೆಂಬರ್ 2020, 13:38 IST
Last Updated 29 ಸೆಪ್ಟೆಂಬರ್ 2020, 13:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಹಿಳೆಯರ ರಾಷ್ಟ್ರೀಯ ಕುಸ್ತಿ ಶಿಬಿರವು ಅಕ್ಟೋಬರ್‌ 10ರಿಂದ ಲಖನೌನಲ್ಲಿ ನಡೆಯಲಿದೆ. ಲಖನೌನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಶಿಬಿರ ನಡೆಯಲಿದ್ದು, ಒಂದು ವೇಳೆ ಶಿಬಿರಕ್ಕೆ ಹಾಜರಾಗದಿದ್ದರೆ ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್‌ 1ರಂದು ಶಿಬಿರ ಆರಂಭವಾಗಬೇಕಿತ್ತು. ಆದರೆ ಕೊರೊನಾ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.

ಇಬ್ಬರು ಪ್ರಮುಖ ಕುಸ್ತಿಪಟುಗಳಾದ ವಿನೇಶಾ ಪೋಗಟ್ ಹಾಗೂ ದೀಪಕ್‌ ಪುನಿಯಾ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದು ಹಲವರ ಆತಂಕಕ್ಕೂ ಕಾರಣವಾಗಿತ್ತು.

ADVERTISEMENT

ಕೋವಿಡ್‌–19ನಿಂದ ಉಂಟಾದ ಪರಿಸ್ಥಿತಿಯ ಅವಲೋಕನ ನಡೆಸಿದಡಬ್ಲ್ಯುಎಫ್‌ಐ ಸಾಯ್‌ನ ಸಲಹೆಯೊಂದಿಗೆ ಶಿಬಿರವನ್ನು ಆರಂಭಿಸಲು ಮನಸ್ಸು ಮಾಡಿದೆ. ಒಲಿಂಪಿಕ್ಸ್‌ನಲ್ಲಿ ಆಯೋಜಿಸಲಾಗುವ 50, 53, 57, 62, 68 ಹಾಗೂ 76 ಕೆಜಿ ವಿಭಾಗಗಳಲ್ಲಿ ತರಬೇತಿ ಶಿಬಿರ ನಡೆಯಲಿದೆ. ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದೆ.

‘ಲಖನೌನಲ್ಲಿ ಅಕ್ಟೋಬರ್‌ 10ರಂದು ಶಿಬಿರವನ್ನು ಆರಂಭಿಸುತ್ತಿದ್ದೇವೆ. ಪ್ರತಿ ವಿಭಾಗದಲ್ಲಿ ಮೂರು ಕುಸ್ತಿಪಟುಗಳಿಗೆ ತರಬೇತಿಯ ಅವಕಾಶ ನೀಡಲಾಗಿದೆ‘ ಎಂದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮರ್‌ ಹೇಳಿದ್ದಾರೆ.

ಮ್ಯಾಟ್‌ ತರಬೇತಿ ಆರಂಭಕ್ಕೂ ಮುನ್ನ ಕುಸ್ತಿಪಟುಗಳು 14 ದಿನಗಳ ಪ್ರತ್ಯೇಕವಾಸ ಪೂರ್ಣಗೊಳಿಸಬೇಕು ಹಾಗೂ ಕೋವಿಡ್‌ ’ನೆಗೆಟಿವ್‌‘ ಪ್ರಮಾಣಪತ್ರ ತರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.