ADVERTISEMENT

ರಾಷ್ಟ್ರೀಯ ಸೈಕ್ಲಿಂಗ್‌: ನವೀನ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 22:08 IST
Last Updated 7 ಜನವರಿ 2023, 22:08 IST
ನವೀನ್ ಜಾನ್‌
ನವೀನ್ ಜಾನ್‌   

ಬೆಂಗಳೂರು: ಕರ್ನಾಟಕದ ನವೀನ್ ಜಾನ್ ಅವರು ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಚೈತ್ರಾ ಬೋರ್ಜಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನ ಸಿನ್ನರ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ನವೀನ್‌ ಅವರು ಪುರುಷರ 40 ಕಿಲೊ ಮೀಟರ್‌ ವೈಯಕ್ತಿಕ ಟೈಮ್‌ ಟ್ರಯಲ್ ವಿಭಾಗದಲ್ಲಿ 51 ನಿಮಿಷ 21.14 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಗಳಿಸಿದರು.

ಬೆಂಗಳೂರಿನ ನವೀನ್ ಅವರಿಗೆ ರಾಷ್ಟ್ರೀಯ ಕೂಟಗಳಲ್ಲಿ ಇದು ಒಟ್ಟು 10ನೇ ಚಿನ್ನ.

ADVERTISEMENT

ಮಹಿಳೆಯರ ವಿಭಾಗದ 30 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ಜಮಖಂಡಿಯ ಚೈತ್ರಾ ಬೋರ್ಜಿ 47 ನಿಮಿಷ 6.37 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.