ADVERTISEMENT

ರಾಷ್ಟ್ರ ಮಟ್ಟದ ಕರಾಟೆ: ಬೆಳಗಾವಿ ಪಟುಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 13:01 IST
Last Updated 29 ನವೆಂಬರ್ 2021, 13:01 IST
ಬೆಳಗಾವಿಯ ಶಾಹುನಗರದ ಯೂನಿವರ್ಸಲ್ ಶೋಟೋಕಾನ್ ಕರಾಟೆ ತಂಡದವರು ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ
ಬೆಳಗಾವಿಯ ಶಾಹುನಗರದ ಯೂನಿವರ್ಸಲ್ ಶೋಟೋಕಾನ್ ಕರಾಟೆ ತಂಡದವರು ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ   

ಬೆಳಗಾವಿ: ಇಲ್ಲಿನ ಶಾಹುನಗರದ ಯೂನಿವರ್ಸಲ್ ಶೋಟೋಕಾನ್ ಕರಾಟೆ ತಂಡದವರು ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ರಾಜ್ಯ ಕರಾಟೆ ಸಂಸ್ಥೆ ಹಾಗೂ ಭಾರತೀಯ ಮಾವುಲಿ ಶೋಟೋಕಾನ್‌ ಕರಾಟೆ ಸಂಘದ ಸಹಯೋಗದಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ಜೈಭೀಮ್‌ ನಗರದ ಆರ್. ಗುಂಡೂರಾವ್ ಕ್ರೀಡಾ ಸಂಕೀರ್ಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಂಗವಾಗಿ ಭಾನುವಾರ ಆಯೋಜಿಸಿದ್ದ ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದ್ದಾರೆ.

ಬಾಲಕಿಯರ ಆರ್ಯಾ ಉರಂಕರ್‌ (10 ವಯೋಮಿತಿ), ಶ್ರದ್ಧಾ ಸೂರ್ಯವಂಶಿ (11 ವಯೋಮಿತಿ), ಕರಿಷ್ಮಾ ಬಿ. (12 ವಯೋಮಿತಿ), ನವ್ಯಾ ಪಿಳ್ಳೈ (13 ವಯೋಮಿತಿ), ಬಾಲಕರ ವಿಭಾಗದಲ್ಲಿ ಧ್ರುವ ಶಿಂಧೆ (13 ವಯೋಮಿತಿ), ರಿಷಿಕೇಶ ಅರಳಿಕಟ್ಟಿ (11 ವಯೋಮಿತಿ), ಶ್ರೇಯಸ್ ವನ್ನೂರ (14 ವಯೋಮಿತಿ), ಎಂ.ನೂತನ್‌ (12 ವಯೋಮಿತಿ) ಹಾಗೂ ತೀರ್ಥ ರಜಪೂತ (10 ವಯೋಮಿತಿ) ಚಿನ್ನದ ಪದಕ ಗೆದ್ದಿದ್ದಾರೆ.

ADVERTISEMENT

ಕಾವೇರಿ ಸೂರ್ಯವಂಶಿ (10 ವಯೋಮಿತಿ) ಬೆಳ್ಳಿ ಮತ್ತು ಸಮೀಕ್ಷಾ ಶ್ರೀಜಿತ್ (10 ವಯೋಮಿತಿ), ಶಾಂಭವಿ ಸೊಗಲಾಡ್ (15 ವಯೋಮಿತಿ) ಹಾಗೂ ಮಂಜಿರಿ ಜಿ.ಬಿ. (14 ವಯೋಮಿತಿ) ಕಂಚಿನ ಪದಕಗಳನ್ನು ಪಡೆದರು.

ವಿಶಾಂಕ್‌ ಎಸ್. (5 ವಯೋಮಿತಿ) ಪ್ರಜ್ವಲ್ ಕಾಂಬ್ಳೆ (14 ವಯೋಮಿತಿ) ಬೆಳ್ಳಿ ಮತ್ತು ಶಿವಂ ಸೂರ್ಯವಂಶಿ (5 ವಯೋಮಿತಿ) ಮತ್ತು ಶುಭಂ ಪವಾರ್ (13 ವಯೋಮಿತಿ) ಕಂಚಿನ ಪದಕ ಗೆದ್ದಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ 450 ಬಾಲಕ-ಬಾಲಕಿಯರು ಭಾಗವಹಿಸಿದ್ದರು. ತರಬೇತುದಾರ ರಾಜು ರಜಪೂತ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಪಟುಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.