ಬೆಂಗಳೂರು: ಕರ್ನಾಟಕದ ಎಂ. ಸಿದ್ಧಾಂತ್ ಹಾಗೂ ಸಾಕ್ಷ್ಯಾ ಸಂತೋಷ್ ಅವರು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಹಾಗೂ 11 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಸಿದ್ಧಾಂತ್ ಅವರು ಫೈನಲ್‌ನಲ್ಲಿ 11–3, 11–7, 7–11, 13–11ರಿಂದ ಪಶ್ಚಿಮ ಬಂಗಾಳದ ಜೆಮ್ ಮಹಾಲನಬಿಷ್ ಅವರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ನಾಲ್ಕರ ಘಟ್ಟದಲ್ಲಿ ಅವರು ಹರಿಯಾಣದ ರೇಯಾನ್ಶ್ ಜೈನ್ ಎದುರು 6–11, 11–8, 11–7, 7–11, 16–14ರಿಂದ ಗೆಲುವು ದಾಖಲಿಸಿದ್ದರು.
ಸಾಕ್ಷ್ಯಾ ಅವರು 11 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ 11–5, 11–3, 11–5ರಿಂದ ಪಶ್ಚಿಮ ಬಂಗಾಳದ ದೆಬಾನ್ನ ಅರಿ ವಿರುದ್ಧ ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.
ಕರ್ನಾಟಕದ ಮತ್ತೊಬ್ಬ ಆಟಗಾರ ಶರ್ವಿಲ್ ಕರಂಬ್ಳೆಕರ ಅವರು 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಶರ್ವಿಲ್ 11–8, 11–5, 11–7ರಿಂದ ಪಶ್ಚಿಮ ಬಂಗಾಳದ ರಾಜ್‌ದೀಪ್ ಬಿಸ್ವಾಸ್ ಎದುರು ನೇರ ಸೆಟ್‌ಗಳಲ್ಲಿ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.