ADVERTISEMENT

ಬೆಂಗಳೂರು: ನ್ಯಾಷನಲ್ಸ್, ಬೀಗಲ್ಸ್ ತಂಡಗಳ ಜಯಭೇರಿ

ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: 42 ಪಾಯಿಂಟ್ ಗಳಿಸಿದ ಭವ್ಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 14:31 IST
Last Updated 14 ಏಪ್ರಿಲ್ 2022, 14:31 IST

ಬೆಂಗಳೂರು: ಮೈಸೂರಿನ ನ್ಯಾಷನಲ್ಸ್ ಬ್ಯಾಸ್ಕೆಟ್‌ಬಾಲ್ ತಂಡ ಮತ್ತು ಬೆಂಗಳೂರಿನ ಬೀಗಲ್ಸ್ ಬಿ.ಸಿ ತಂಡಗಳು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಜಯ ಗಳಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ನ್ಯಾಷನಲ್ಸ್ ತಂಡ 50–25ರಲ್ಲಿ ಬೀಗಲ್ಸ್ ವಿರುದ್ಧ ಜಯ ಗಳಿಸಿತು. ಕುಶಾಲ್ 28 ಪಾಯಿಂಟ್‌ಗಳೊಂದಿಗೆ ನ್ಯಾಷನಲ್ಸ್ ಪರವಾಗಿ ಮಿಂಚಿದರು. ಬೀಗಲ್ಸ್‌ಗಾಗಿ ಆರ್ಯಮನ್ ಮಕ್ಕಾರ್ 10 ಪಾಯಿಂಟ್ ಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಬೀಗಲ್ಸ್ ಪಾರಮ್ಯ ಮೆರೆಯಿತು. ಸಿಜೆಸಿ ಎದುರಿನ ಪಂದ್ಯದಲ್ಲಿ ಬೀಗಲ್ಸ್ 22–21ರಲ್ಲಿ ಜಯ ಗಳಿಸಿತು. ಅದಿಶಾ 10 ಮತ್ತು ಸ್ವಾತಿ 8 ಪಾಯಿಂಟ್‌ಗಳೊಂದಿಗೆ ಬೀಗಲ್ಸ್ ಪರವಾಗಿ ಮಿಂಚಿದರು. ಸಿಜೆಜಿಗಾಗಿ ನಿಶ್ಕಾ 13 ಪಾಯಿಂಟ್ ಗಳಿಸಿದರು.

ADVERTISEMENT

ಬಾಲಕರ ಇತರ ಪಂದ್ಯಗಳಲ್ಲಿ ಎಸ್‌. ಬ್ಲೂಸ್ 56–6ರಲ್ಲಿ ಎಸ್‌.ಸಿ ದಾವಣಗೆರೆಯನ್ನು ಮಣಿಸಿತು. ರಾಘವ್‌ (23), ತನ್ಮಯ್ (10) ಬ್ಲೂಸ್ ಪರವಾಗಿ ಮಿಂಚಿದರು. ಬಿ.ಸಿ ಬಿ.ಸಿ ತಂಡ 28–26ರಲ್ಲಿ ಬಾಗಲಕೋಟೆ ಬಿ.ಸಿಯನ್ನು ಮಣಿಸಿತು. ಬಿ.ಸಿ ಬಿ.ಸಿಗಾಗಿ ಧ್ರುವ್‌ 10 ಪಾಯಿಂಟ್ ತಂದುಕೊಟ್ಟರೆ ಬಾಗಲಕೋಟೆ ತಂಡಕ್ಕಾಗಿ ವಿನಾಯಕ್ 18 ಪಾಯಿಂಟ್ ಕಲೆ ಹಾಕಿದರು.

ಎಂಎನ್‌ಕೆ ರಾವ್ ಬಿ.ಸಿ 52–8ರಲ್ಲಿ ಧಾರವಾಡದ ಮಲ್ಲಸಜ್ಜನ ಬಿ.ಸಿಯನ್ನು ಮಣಿಸಿತು. ಹಿತೀನ್ ಜೈನ್ (10) ಎಂಎನ್‌ಕೆ ಪರ ಮಿಂಚಿದರು. ಎಚ್‌ಬಿಆರ್‌ ಬಿ.ಸಿ 59–19ರಲ್ಲಿ ಮಂಗಳೂರು ಬಿ.ಸಿಯನ್ನು ಸೋಲಿಸಿತು. ಚತುರ 34, ಸಂವೇದ್‌ 17 ಪಾಯಿಂಟ್ ಗಳಿಸಿ ಎಚ್‌ಬಿಆರ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಿಪಿಸಿ 50–8ರಲ್ಲಿ ನೆಟ್ಟಕಲ್ಲಪ್ಪ ತಂಡವನ್ನು ಸೋಲಿಸಿತು. ಪಿಪಿಸಿಗಾಗಿ ಅದ್ವಿತ್‌ 13 ಮತ್ತು ಮಿಹಿರ್ 10 ಪಾಯಿಂಟ್ ಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಅಪ್ಪಯ್ಯ ಬಿ.ಸಿ 60–21ರಲ್ಲಿ ಹಲಸೂರು ಎಸ್‌ಯು ತಂಡವನ್ನು ಮಣಿಸಿತು. ಹಸಿನಿ 14 ಮತ್ತು ಮೌಲ್ಯ 10 ಪಾಯಿಂಟ್‌ಗಳೊಂದಿಗೆ ಅಪ್ಪಯ್ಯ ತಂಡಕ್ಕಾಗಿ ಮಿಂಚಿದರು. ಹಲಸೂರು ಪರವಾಗಿ ಜಾಹ್ನವಿ 10 ಪಾಯಿಂಟ್ ಗಳಿಸಿದರು. ಎಂಸಿಎಚ್‌ಎಸ್ 48–17ರಲ್ಲಿ ವೈಎಂಎಂಎಯನ್ನು ಸೋಲಿಸಿತು. ಎಂಸಿಎಚ್‌ಎಸ್‌ಗಾಗಿ ಅದಿತಿ 16, ಆಹನಾ 10 ಪಾಯಿಂಟ್ ಗಳಿಸಿದರು. ಪಿಪಿಸಿ 29–12ರಲ್ಲಿ ಓರಿಯನ್ಸ್‌ ಎಸ್‌ಸಿಯನ್ನು ಮಣಿಸಿತು. ರಿಧಿ (11), ತನ್ವಿ (8) ಪಿಪಿಸಿ ಪರವಾಗಿ ಮಿಂಚಿದರು. ಎಚ್‌ಬಿಆರ್‌ ಬಿ.ಸಿ 63–12ರಲ್ಲಿ ಭಾರತ್‌ ಎಸ್‌ಯುವನ್ನು ಸೋಲಿಸಿತು. ಎಚ್‌ಬಿಆರ್‌ಗಾಗಿ ಭವ್ಯ 42, ನಿಧಿ 10 ಪಾಯಿಂಟ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.