ADVERTISEMENT

ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನ: ಬೋಲ್ಟ್‌ ಹಿಂದಿಕ್ಕಿದ ನೀರಜ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 1:55 IST
Last Updated 17 ಡಿಸೆಂಬರ್ 2022, 1:55 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ಪ್ಯಾರಿಸ್‌ (ಎಎಫ್‌ಪಿ): ಈ ವರ್ಷ ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನಗಳು ಪ್ರಕಟಗೊಂಡ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಕಳೆದ ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಜಮೈಕದ ಸ್ಪ್ರಿಂಟರ್‌ ಉಸೇನ್‌ ಬೋಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ. ಜಾಗತಿಕ ಮಾಧ್ಯಮಗಳಲ್ಲಿ ಯಾವ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟ್‌
ಬಗ್ಗೆ ಅತಿಹೆಚ್ಚು ಲೇಖನಗಳು ಪ್ರಕಟವಾಗಿವೆ ಎಂಬುದನ್ನು ಆಧರಿಸಿ ವಿಶ್ವ ಅಥ್ಲೆಟಿಕ್‌ ಫೆಡರೇಷನ್‌ ಪ್ರತಿವರ್ಷವೂ ಪಟ್ಟಿ ಬಿಡುಗಡೆ ಮಾಡುತ್ತದೆ.

ಮಾಧ್ಯಮ ವಿಶ್ಲೇಷಕ ಕಂಪೆನಿ ಯುನಿಸೆಪ್ಟಾ ಪ್ರಕಾರ, ಚೋಪ್ರಾ ಬಗ್ಗೆ 2022 ರಲ್ಲಿ ಒಟ್ಟು 812 ಲೇಖನಗಳು ಪ್ರಕಟವಾಗಿವೆ. ಬೋಲ್ಟ್‌ ಕುರಿತು ಪ್ರಕಟವಾಗಿರುವ ಲೇಖನಗಳು 574 ಮಾತ್ರ. 2017 ರಲ್ಲಿ ನಿವೃತ್ತಿಯಾಗಿದ್ದರೂ ಬೋಲ್ಟ್‌ ಹಲವು ವರ್ಷಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಜಮೈಕದ ಓಟಗಾರ್ತಿಯರಾದ ಎಲೈನ್ ಥಾಂಪ್ಸನ್ ಹೆರಾ (751 ಲೇಖನ), ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರೈಸ್‌ (698) ಮತ್ತು ಶೆರಿಕಾ ಜಾಕ್ಸನ್‌ (679) ಅವರು ಚೋಪ್ರಾ ಬಳಿಕದ
ಸ್ಥಾನಗಳಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.