ADVERTISEMENT

ನೆಟ್‌ಬಾಲ್‌: ದಕ್ಷಿಣ ಕನ್ನಡ ತಂಡಕ್ಕೆ ಪ್ರಶಸ್ತಿ ಗರಿ

ರಾಜ್ಯಮಟ್ಟದ ಸಬ್‌ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:43 IST
Last Updated 20 ಡಿಸೆಂಬರ್ 2019, 19:43 IST
ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ದಕ್ಷಿಣ ಕನ್ನಡ ಹಾಗೂ ಬಸವೇಶ್ವರ ಹೈಸ್ಕೂಲ್‌ ತಂಡಗಳು
ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ದಕ್ಷಿಣ ಕನ್ನಡ ಹಾಗೂ ಬಸವೇಶ್ವರ ಹೈಸ್ಕೂಲ್‌ ತಂಡಗಳು   

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಬೆಂಗಳೂರಿನ ಬಸವೇಶ್ವರ ಹೈಸ್ಕೂಲ್‌ ತಂಡಗಳು ರಾಜ್ಯಮಟ್ಟದ ಸಬ್‌ಜೂನಿಯರ್‌ ನೆಟ್‌ಬಾಲ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡವು. ಬೆಂಗಳೂರು ನೆಟ್‌ಬಾಲ್‌ ಸಂಸ್ಥೆಯು ಟೂರ್ನಿಯನ್ನು ಆಯೋಜಿಸಿತ್ತು.

ಇಲ್ಲಿಯ ಮಲ್ಲೇಶ್ವರದ ಕೆಂಪೇಗೌಡ ಕ್ರೀಡಾಂಗಣದಲ್ಲಿ ನಡೆದ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು ಬಸವೇಶ್ವರ ಹೈಸ್ಕೂಲ್‌ ಬೆಂಗಳೂರು ತಂಡದ ಎದುರು 16–10 ಅಂಕಗಳಿಂದ ಗೆದ್ದಿತು. ಮೂರನೆಯ ಸ್ಥಾನವನ್ನು ಚಿಕ್ಕೋಡಿ ತಂಡ ತನ್ನದಾಗಿಸಿಕೊಂಡಿತು.

ಬಾಲಕಿಯರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಬಸವೇಶ್ವರ ಹೈಸ್ಕೂಲ್‌ ತಂಡವು ಮಾರುತಿ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ ಎದುರು 16–10ರಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತು. ಮೂರನೇ ಸ್ಥಾನವನ್ನು ಬೆಂಗಳೂರಿನ ಚಾಣಕ್ಯ ಪಬ್ಲಿಕ್‌ ಸ್ಕೂಲ್‌ ಗಳಿಸಿತು.

ADVERTISEMENT

ಟೂರ್ನಿಯಲ್ಲಿ ಬಾಲಕರ 16 ಹಾಗೂ ಬಾಲಕಿಯರ 10 ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.