ಬೆಂಗಳೂರು: ಗ್ಲೋಬಲ್ ಈಜು ಕೇಂದ್ರದ ಲಿನೇಶಾ ಎ.ಕೆ. ಹಾಗೂ ಡಾಲ್ಫಿನ್ ಅಕ್ವಾಟಿಕ್ಸ್ನ ಆರ್. ನವನೀತ್ ಗೌಡ ಅವರು ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್ಎಸಿ) ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್ಷಿಪ್’ನ ಕೊನೆಯ ದಿನ ಮಿಂಚಿದರು.
ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆ, ಪದ್ಮನಾಭನಗರದಲ್ಲಿರುವ ಈಜು ಕೇಂದ್ರದಲ್ಲಿ ಭಾನುವಾರ ನಡೆದ ಮಹಿಳೆಯರ 50 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ ಹಾಗೂ ಬಾಲಕಿಯರ ಒಂದನೇ ಗುಂಪಿನ 100 ಮೀ. ಬ್ರೆಸ್ಟ್ಸ್ಟ್ರೋಕ್ನಲ್ಲಿ ಲಿನೇಶಾ ಚಿನ್ನ ಗೆದ್ದರು.
ನವನೀತ್ ಗೌಡ ಅವರು ಬಾಲಕರ ಎರಡನೇ ಗುಂಪಿನ 200 ಮೀ. ಮೆಡ್ಲೆ ಮತ್ತು 100 ಮೀ. ಬ್ರೆಸ್ಟ್ಸ್ಟ್ರೋಕ್ನಲ್ಲಿ ಅಗ್ರಸ್ಥಾನ ಗಳಿಸಿದರು.
ಜೈನ್ ವಿಶ್ವವಿದ್ಯಾಲಯದ ಶೃಂಗಿ ರಾಜೇಶ್ ಬಾಂದೇಕರ್ ಅವರು ಮಹಿಳೆಯರ 100 ಮೀ. ಬ್ರೆಸ್ಟ್ಸ್ಟ್ರೋಕ್ ಮತ್ತು 100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು.
ಫಲಿತಾಂಶಗಳು: ಪುರುಷರು: ಮುಕ್ತ ವಿಭಾಗ: 50 ಮೀ. ಬ್ರೆಸ್ಟ್ಸ್ಟ್ರೋಕ್: ಎಸ್. ಧನುಶ್ (ಏಸಸ್, ಕಾಲ: 28.82 ಸೆ.)–1, ಲೋಹಿತ್ ಎಂ. (ಡಾಲ್ಫಿನ್ ಅಕ್ವಾಟಿಕ್ಸ್)–2, ಸುನೀಶ್ ಎಸ್ (ಗ್ಲೋಬಲ್ ಈಜು ಕೇಂದ್ರ)–3.
50 ಮೀ.ಫ್ರೀಸ್ಟೈಲ್: ಪವನ್ ಗುಪ್ತಾ (ಎಸ್ಡಿಎಟಿ ಡಾಲ್ಫಿನ್; ಕಾಲ: 24.46 ಸೆ.–1, ಶಿವ ಎಸ್. (ಬಿಎಸಿ)–2, ಪ್ರಥಮ್ ಶರ್ಮಾ (ಡಾಲ್ಫಿನ್ ಅಕ್ವಾಟಿಕ್ಸ್)–3
ಬಾಲಕರ ಗುಂಪು 1: 100 ಮೀ. ಬ್ರೆಸ್ಟ್ಸ್ಟ್ರೋಕ್: ನಯನ್ ವಿಘ್ನೇಶ್ (ನೆಟ್ಟಕಲ್ಲಪ್ಪ ಈಜು ಕೇಂದ್ರ, 1 ನಿ. 9.02 ಸೆ.)–1, ಸೂರ್ಯ ಜೋಯಪ್ಪ ಓ. ಆರ್. (ಬಸವನಗುಡಿ)–2, ಸುಯೋಗ್ ಗೌಡ (ಎನ್ಎಸಿ)–3
100 ಮೀ. ಫ್ರೀಸ್ಟೈಲ್: ಶಿವಾಂಕ್ ವಿಶ್ವನಾಥ್ (ರೇ ಸೆಂಟರ್; ಕಾಲ: 55.98 ಸೆ.)–1, ರಿಷಭ್ ಸಿಂಗ್ (ಡಾಲ್ಫಿನ್)–2, ಆರ್.ಅಕ್ಷಯ್ ಶೇಟ್ (ಗ್ಲೋಬಲ್ ಸ್ವಿಮ್ ಸೆಂಟರ್)–3
ಬಾಲಕರ ಗುಂಪು 2: 200 ಮೀ. ಮೆಡ್ಲೆ: ಆರ್. ನವನೀತ್ ಗೌಡ (ಡಾಲ್ಫಿನ್, 2 ನಿ. 23.65ಸೆ.)–1, ರಾಘವ್ ಸ್ವಚ್ಛಂದಮ್ (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ದರ್ಶನ್ ಎಸ್. (ಬಸವನಗುಡಿ)–3.
100 ಮೀ. ಬ್ರೆಸ್ಟ್ಸ್ಟ್ರೋಕ್: ನವನೀತ್ ಗೌಡ (ಡಾಲ್ಫಿನ್, 1 ನಿ. 15.47 ಸೆ.)–1, ಜೆ. ಗಣೇಶ್ ಚಕ್ರಧಾರ್ (ಡಾಲ್ಫಿನ್)–2, ಆರ್. ದರ್ಶನ್ (ಏಸಸ್)–3.
200 ಮೀ. ಫ್ರೀಸ್ಟೈಲ್: ಎಸ್.ದಕ್ಷಣ್ (ಬಿಎಸಿ; ಕಾಲ: 2 ನಿ. 06.58 ಸೆ.)–1, ದರ್ಶನ್ ಎಸ್. (ಬಿಎಸಿ)–2, ಕುಶಾಲ್ ಕೆ. (ಬಿಎಸಿ)–3
100 ಮೀ. ಫ್ರೀಸ್ಟೈಲ್: ಕುಶಾಲ್ ಕೆ. (ಬಿಎಸಿ; ಕಾಲ: 59.08 ಸೆ.)–1, ಆರ್.ನವನೀತ್ ಗೌಡ (ಡಾಲ್ಫಿನ್)–2, ದರ್ಶನ್ ಎಸ್. (ಬಿಎಸಿ)–3
18 ವರ್ಷಕ್ಕಿಂತ ಮೇಲಿನವರು: 100 ಮೀ. ಬ್ರೆಸ್ಟ್ಸ್ಟ್ರೋಕ್: ಎಸ್. ಧನುಷ್ (ಏಸಸ್, 1 ನಿ. 6.14ಸೆ.)–1, ಲೋಹಿತ್ ಎಂ. (ಡಾಲ್ಫಿನ್)–2, ಸುನೀಶ್ ಎಸ್. (ಗ್ಲೋಬಲ್)–3.
400 ಮೀ. ಫ್ರೀಸ್ಟೈಲ್: ಧ್ಯಾನ್ ಬಾಲಕೃಷ್ಣ (ಬಸವನಗುಡಿ, 4 ನಿ. 23.79 ಸೆ.)–1, ಮಿತೇಶ್ ಕುಂಟೆ (ಎನ್ಎಸಿ)–2, ಮನೋಜ್ ನಾಯಕ್ ಬಿ. (ಬಸವನಗುಡಿ)–3.
100 ಮೀ. ಫ್ರೀಸ್ಟೈಲ್: ಪವನ್ ಗುಪ್ತಾ (ಎಸ್ಡಿಎಟಿ ಡಾಲ್ಫಿನ್; ಕಾಲ: 54.49 ಸೆ.)–1, ವಸುರಾಂ ಎಂ. (ಗ್ಲೋಬಲ್ ಸ್ವಿಮ್ ಸೆಂಟರ್)–2, ಮನೋಜ್ ನಾಯಕ (ಬಿಎಸಿ)–3.
ಮಹಿಳೆಯರು:
ಮುಕ್ತ ವಿಭಾಗ: 50 ಮೀ. ಬ್ರೆಸ್ಟ್ಸ್ಟ್ರೋಕ್: ಲಿನೇಶಾ ಎ.ಕೆ. (ಗ್ಲೋಬಲ್, 35.04)–1, ಇ.ಎಸ್. ಸಮನ್ವಿ (ಬಸವನಗುಡಿ)–2, ಜರಾ ಜಬ್ಬಾರ್ (ಡಾಲ್ಪಿನ್)–3
50 ಮೀ. ಫ್ರೀಸ್ಟೈಲ್: ಶಾಲಿನಿ ಆರ್.ದೀಕ್ಷಿತ್ (ಡಾಲ್ಫಿನ್; ಕಾಲ: 27.57 ಸೆ.)–1, ರುಜುಲಾ ಎಸ್. (ಡಾಲ್ಫಿನ್)–2, ಅಶ್ಮಿತಾ ಚಂದ್ರ (ಡೆಕ್ಕನ್ ಇಂಟರ್ನ್ಯಾಷನಲ್ ಸ್ಕೂಲ್)–3
18 ವರ್ಷಕ್ಕಿಂತ ಮೇಲಿನವರು: 100 ಮೀ. ಬ್ರೆಸ್ಟ್ಸ್ಟ್ರೋಕ್: ಶೃಂಗಿ ರಾಜೇಶ್ ಬಾಂದೇಕರ್ (ಜೈನ್ ವಿವಿ, 1 ನಿ. 22.06 ಸೆ.)–1, ಅನುಮತಿ ಚೌಗುಲೆ (ಜೈನ್ ವಿವಿ)–2, ಜರಾ ವಿಲಿಯಮ್ಸ್ (ಡಾಲ್ಫಿನ್)–3.
400 ಮೀ. ಫ್ರೀಸ್ಟೈಲ್: ಆದ್ಯಾ ನಾಯಕ್ (ರೇ, 4 ನಿ. 55.14ಸೆ.)–1, ಅನುಮತಿ ಚೌಗುಲೆ (ಜೈನ್ ವಿವಿ)–2, ಕ್ಷಿತಿಜ್ ಕೆ. (ಬಸವನಗುಡಿ)–3
100 ಮೀ. ಫ್ರೀಸ್ಟೈಲ್: ಶೃಂಗಿ ರಾಜೇಶ್ ಬಾಂದೇಕರ್ (ಜೈನ್ ವಿವಿ; ಕಾಲ: 1 ನಿ. 02.49 ಸೆ.)–1, ಆದ್ಯಾ ನಾಯಕ್ (ರೇ ಸೆಂಟರ್)–2, ಜರಾ ವಿಲಿಯಮ್ಸ್ (ಡಾಲ್ಫಿನ್)–3
ಬಾಲಕಿಯರ ಗುಂಪು 1: 100 ಮೀ. ಬ್ರೆಸ್ಟ್ಸ್ಟ್ರೋಕ್: ಲಿನೇಶಾ ಎ.ಕೆ. (ಗ್ಲೋಬಲ್, 1 ನಿ. 19.51 ಸೆ.)–1, ಜರಾ ಜಬ್ಬಾರ್ (ಡಾಲ್ಫಿನ್)–2, ಮೇಘಾಂಜಲಿ (ಗ್ಲೋಬಲ್)–3.
100 ಮೀ. ಫ್ರೀಸ್ಟೈಲ್: ಶಾಲಿನಿ ಆರ್.ದೀಕ್ಷಿತ್ (ಡಾಲ್ಫಿನ್; ಕಾಲ: 1 ನಿ.01.9 ಸೆ.)–1, ಲಿನೇಶಾ ಎ.ಕೆ. (ಗ್ಲೋಬಲ್ ಸ್ವಿಮ್ ಸೆಂಟರ್)–2, ಆರುಷಿ ಅಗರವಾಲ್ (ಡಾಲ್ಫಿನ್)–3
ಬಾಲಕಿಯರ ಗುಂಪು 2: 200 ಮೀ. ಮೆಡ್ಲೆ: ನೈಶಾ (ಬಸವನಗುಡಿ, 2 ನಿ. 37.60 ಸೆ.)–1, ದಯನಿತಾ ಎಸ್. (ರೇ ಈಜು ಕೇಂದ್ರ)–2, ಶ್ರೀ ಚರಣಿ ತುಮು (ಗ್ಲೋಬಲ್)–3.
200 ಮೀ. ಫ್ರೀಸ್ಟೈಲ್: ಶ್ರೀ ಚರಣಿ ತುಮು (ಗ್ಲೋಬಲ್ ಸ್ವಿಮ್ ಸೆಂಟರ್; ಕಾಲ: 2 ನಿ. 17.62 ಸೆ.)–1, ನೈಶಾ (ಬಿಎಸಿ)–2, ರುಜುಲಾ ಎಸ್. (ಡಾಲ್ಫಿನ್)–3
100 ಮೀ. ಬ್ರೆಸ್ಟ್ಸ್ಟ್ರೋಕ್: ಮಿಹಿಕಾ ದತ್ತ (ಡಾಲ್ಫಿನ್, 1 ನಿ. 21.90 ಸೆ.)–1, ಇ.ಎಸ್ ಸಮನ್ವಿ (ಬಸವನಗುಡಿ)–2, ಶ್ರೀ ಚರಣಿ ತುಮು (ಗ್ಲೋಬಲ್)–3.
100 ಮೀ. ಫ್ರೀಸ್ಟೈಲ್: ರುಜುಲಾ ಎಸ್. (ಡಾಲ್ಫಿನ್; ಕಾಲ: 1 ನಿ. 03.41)–1, ನೈಶಾ (ಬಿಎಸಿ)–2, ಆರ್ನ ಎಂ.ಪಿ. (ಬಿಎಸಿ)–3
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.