ADVERTISEMENT

ನಿಧನ ವಾರ್ತೆ: ಸ್ಕೆಟ್‌ಬಾಲ್ ಆಟಗಾರ ಆರ್. ಜೈರಾಜ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 17:11 IST
Last Updated 30 ಜುಲೈ 2020, 17:11 IST
ಆರ್. ಜೈರಾಜ್
ಆರ್. ಜೈರಾಜ್   

ಬೆಂಗಳೂರು: ಮಾಜಿ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ ಆರ್. ಜೈರಾಜ್ (84) ಗುರುವಾರ ಬೆಳಿಗ್ಗೆ ನಿಧನರಾದರು.

ಅವರು ಕೆಲ ಸಮಯದಿಂದ ಹೈದರಾಬಾದಿನಲ್ಲಿ ತಮ್ಮ ಮಗಳ ಮನೆಯಲ್ಲಿದ್ದರು. ಅಲ್ಲಿಯೇ ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

’ಮಲ್ಲೇಶ್ವರದ ಹೆಮ್ಮೆಯ ಬ್ಯಾಸ್ಕೆಟ್ ಬಾಲ್ ಆಟಗಾರರಾಗಿದ್ದವರು. 1960ರ ದಶಕದಲ್ಲಿ ಅವರು ಉತ್ತಮ ಆಟಗಾರನಾಗಿ ಹೆಸರುವಾಸಿಯಾಗಿದ್ದರು ವೇಗ ಮತ್ತು ಚಾಣಾಕ್ಷ ಆಟಗಾರರಾಗಿದ್ದರು. ಆಗಿನ ಮೈಸೂರು ರಾಜ್ಯ ತಂಡಕ್ಕೆ ಆಡಿದ್ದರು. ಟೋಕಿಯೊದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು‘ ಎಂದು ಹಿರಿಯ ಆಟಗಾರ ರಾಜಗೋಪಾಲ್ ಕಡಂಬಿ ಅವರು ಜೈರಾಜ್ ಕುರಿತು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.