ಕಟಕ್: ಭಾರತದ ಚಿರಾಗ್ ಸೇನ್ ಇಲ್ಲಿ ನಡೆಯುತ್ತಿರುವ ಒಡಿಶಾ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಪುರುಷ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮೂರನೇ ಶ್ರೇಯಾಂಕದ ಮ್ಯಾಡ್ಸ್ ಕ್ರಿಸ್ಟೋಫರ್ಸನ್ ಅವರನ್ನು ಮಣಿಸಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಉನ್ನತಿ ಹೂಡಾ 21-18, 21-16ರಿಂದ ಅಶ್ಮಿತಾ ಚಾಲಿಹಾ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು.
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಮತ್ತು ರುತುಪರ್ಣ ಪಾಂಡಾ- ಶ್ವೇತಪರ್ಣ ಪಾಂಡಾ ಜೋಡಿ ಕ್ವಾರ್ಟರ್ ಫೈನಲ್ ತಲುಪಿದರು.
ಮಿಶ್ರ ಡಬಲ್ಸ್‌ನಲ್ಲಿ ಉನ್ನತಿ ಹೂಡಾ ಮತ್ತು ಕಿರಣ್ ಜಾರ್ಜ್ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ತನಿಶಾ ಮತ್ತು ಧ್ರುವ್ ಕಪಿಲಾ ಜೋಡಿ 21-16, 21-12 ರಿಂದ ಇಂಡೊನೇಷ್ಯಾದ ಅಮ್ರಿ ಸ್ಯಾಹ್ನವಿ ಮತ್ತು ವಿನ್ನಿ ಒಕ್ಟಾವಿನಾ ಕಂಡೊ ಅವರನ್ನು ಸೋಲಿಸಿದರು. ಅಶ್ವಿನಿ ಮತ್ತು ರೋಹನ್ ಕಪೂರ್ 21-13, 21-13ರಿಂದ ಎಂಟನೇ ಶ್ರೇಯಾಂಕದ ಸುಮಿತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ವಿರುದ್ಧ ಗೆದ್ದರು.
ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ. 1 ಮತ್ತು ನಾಲ್ಕನೇ ಶ್ರೇಯಾಂಕದ ಜಪಾನ್ ನೊಜೊಮಿ ಒಕುಹರಾ ಇಂಡೊನೇಷ್ಯಾದ ಸ್ಟೆಫನಿ ವಿಡ್ಜಾಜಾ ವಿರುದ್ಧ 21-11, 21-16 ಅಂತರದಲ್ಲಿ ಜಯಗಳಿಸಿದರು.
ಶ್ರೇಯಾಂಕರಹಿತ ಸುಭಾಂಕರ್ ಡೇ 21–15, 14–21, 15–21ರಲ್ಲಿ ಐದನೇ ಶ್ರೇಯಾಂಕದ ಮಿಥುನ್ ಮಂಜುನಾಥ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.