ADVERTISEMENT

ಆನ್‌ಲೈನ್ ಚೆಸ್‌: ಚಾರ್ವಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 12:24 IST
Last Updated 18 ಜುಲೈ 2021, 12:24 IST
ಚಾರ್ವಿ ಎ.
ಚಾರ್ವಿ ಎ.   

ಬೆಂಗಳೂರು: ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿನಿ ಚಾರ್ವಿ ಎ. ಎಐಸಿಎಫ್‌ರಾಷ್ಟ್ರೀಯ ಆನ್‌ಲೈನ್‌ ಶಾಲಾ ಚೆಸ್ ಚಾಂಪಿಯನ್‌ಷಿಪ್‌ನಏಳು ವರ್ಷದೊಳಗಿನವರ ವಿಭಾಗದಲ್ಲಿ ಭಾನುವಾರ ಚಿನ್ನದ ಪದಕ ಗೆದ್ದುಕೊಂಡಿದ್ದಾಳೆ. ಇದರೊಂದಿಗೆ ಈ ವರ್ಷದ ಏಷ್ಯನ್ ಆನ್‌ಲೈನ್‌ ಶಾಲಾ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾಳೆ.

ಚಾಂಪಿಯನ್‌ಷಿಪ್‌ನಲ್ಲಿ ಚಾರ್ವಿ ಒಟ್ಟು ಒಂಬತ್ತು ಪಾಯಿಂಟ್ಸ್ ಗಳಿಸಿ 10 ವರ್ಷದೊಳಗಿನವರ ವಿಶ್ವ ಯೂತ್ ಚೆಸ್‌ ಚಾಂಪಿಯನ್‌ಷಿಪ್‌ಗೂ ಆಯ್ಕೆಯಾದಳು. ತೆಲಂಗಾಣದ ಸಂಹಿತಾ ಪುಂಗವನಂ (8 ಪಾಯಿಂಟ್ಸ್) ಮತ್ತು ಮಹಾರಾಷ್ಟ್ರದ ಇರಾ ಬೊಹ್ರಾ (7 ಪಾಯಿಂಟ್ಸ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು ಎಂದು ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT