ADVERTISEMENT

ವಿಜೇಂದರ್‌–ಮಾರ್ಕಮ್‌ ಪಂದ್ಯ ಮುಂದಕ್ಕೆ

ಪಿಟಿಐ
Published 7 ಜುಲೈ 2018, 20:10 IST
Last Updated 7 ಜುಲೈ 2018, 20:10 IST
ವಿಜೇಂದರ್‌ ಸಿಂಗ್
ವಿಜೇಂದರ್‌ ಸಿಂಗ್   

ನವದೆಹಲಿ: ಭಾರತದ ಬಾಕ್ಸರ್‌ ವಿಜೇಂದರ್‌ ಸಿಂಗ್ ಮತ್ತು ಬ್ರಿಟನ್‌ನ ಲೀ ಮಾರ್ಕಮ್‌ ನಡುವಣ ಕಾಮನ್‌ವೆಲ್ತ್‌ ಸೂಪರ್‌ ಮಿಡ್ಲ್‌ವೇಟ್‌ ಟೈಟಲ್‌ ಪಂದ್ಯವನ್ನು ಮುಂದೂಡಲಾಗಿದೆ.

ಈ ಹೋರಾಟ ಜುಲೈ 16ರಂದು ನಿಗದಿಯಾಗಿತ್ತು. ಲೀ ಗಾಯಗೊಂಡಿರುವ ಕಾರಣ ಪಂದ್ಯವನ್ನು ಮುಂದೂಡಲಾಗಿದೆ.

ವಿಜೇಂದರ್‌ ಅವರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯ ಗೆಲುವಿನ ದಾಖಲೆ ಹೊಂದಿದ್ದಾರೆ. ಅವರು ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್‌ ಮತ್ತು ಓರಿಯೆಂಟಲ್‌ ಸೂಪರ್‌ ಮಿಡಲ್‌ವೇಟ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ADVERTISEMENT

‘ಮಾರ್ಕರಮ್‌ ಅವರು ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ನಿಗದಿತ ದಿನದಂದು ಪಂದ್ಯ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಐಒಎಸ್‌ ಬಾಕ್ಸಿಂಗ್‌ ಸಂಸ್ಥೆ ತಿಳಿಸಿದೆ.

ಮಾರ್ಕಮ್‌ ಅವರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿದ್ದು 17ರಲ್ಲಿ ಗೆದ್ದಿದ್ದಾರೆ.

2015ರಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಿದ್ದ ವಿಜೇಂದರ್‌ ಅವರು ಅಂದಿನಿಂದಲೂ ಬ್ರಿಟನ್‌ನ ಲೀ ಬಿಯರ್ಡ್‌ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.