ADVERTISEMENT

ಸ್ನೂಕರ್‌: ಕ್ವಾರ್ಟರ್‌ ಫೈನಲ್‌ಗೆ ಪಂಕಜ್‌ ಅಡ್ವಾಣಿ

ಪಿಟಿಐ
Published 4 ಜುಲೈ 2025, 19:52 IST
Last Updated 4 ಜುಲೈ 2025, 19:52 IST
<div class="paragraphs"><p>ಪಂಕಜ್‌&nbsp;ಅಡ್ವಾಣಿ</p></div>

ಪಂಕಜ್‌ ಅಡ್ವಾಣಿ

   

ಮಾರಿಷಸ್: ಭಾರತದ ಪಂಕಜ್ ಅಡ್ವಾಣಿ ಶುಕ್ರವಾರ ಇಲ್ಲಿ ನಡೆದ ಕಾಮನ್‌ವೆಲ್ತ್ ಬಿಲಿಯರ್ಡ್ಸ್ ಚಾಂಪಿಯನ್‌ ಷಿಪ್‌ನ 6-ರೆಡ್ ಸ್ನೂಕರ್ ಟೂರ್ನಿಯಲ್ಲಿ ಕ್ವಾರ್ಟರ್ಫೈ ನಲ್‌ ತಲುಪಿದರು.

ಹಲವು ಬಾರಿಯ ವಿಶ್ವ ಚಾಂಪಿಯನ್‌ ಅಡ್ವಾಣಿ ಪುರುಷರ ವಿಭಾಗದ ಸ್ಪರ್ಧೆಯಲ್ಲಿ 3–1ರಿಂದ ಆಸ್ಟ್ರೇಲಿಯಾದ ಕ್ಸೇವಿಯರ್ ಡಾವ್ ಅವರನ್ನು ಸೋಲಿಸಿದರು.  ಭಾರತದ ಮತ್ತೊಬ್ಬ ಸ್ಪರ್ಧಿ ಬ್ರಿಜೇಶ್ ದಮಾನಿ 1–3ರಿಂದ ಸೈಪ್ರಸ್‌ನ ಮೈಕೆಲ್ ಜಾರ್ಜಿಯೊ ವಿರುದ್ಧ ಸೋತರು.

ADVERTISEMENT

ಮಹಿಳಾ ವಿಭಾಗದಲ್ಲಿ ಕೀರ್ತನಾ ಪಾಂಡಿಯನ್ ಮತ್ತು ಏಷ್ಯನ್ ಚಾಂಪಿಯನ್ ಅನುಪಮಾ ರಾಮಚಂದ್ರನ್ ‌ಕ್ವಾರ್ಟರ್ ಫೈನಲ್ ತಲುಪಿದರು. ಕೀರ್ತನಾ 2–1ರಿಂದ ಸ್ವಾಜಿಲ್ಯಾಂಡ್‌ನ ಸಿಂಫಿವೆ ಡ್ಲಾಮಿನಿ ವಿರುದ್ಧ; ಅನುಪಮಾ 2–1ರಿಂದ ಆಸ್ಟ್ರೇಲಿಯಾದ ಲಿಲ್ಲಿ ಮೆಲ್ಡ್ರಮ್ ವಿರುದ್ಧ ಗೆಲುವು ಸಾಧಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.