ADVERTISEMENT

‘ಒಂಬತ್ತಕ್ಕಿಂತ ಹೆಚ್ಚು ಪದಕಗಳ ನಿರೀಕ್ಷೆ’

ಮೈಸೂರಿನಲ್ಲಿ ಮಾರ್ಚ್‌ 26ರಿಂದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 18:50 IST
Last Updated 29 ಫೆಬ್ರುವರಿ 2020, 18:50 IST

ಬೆಂಗಳೂರು: ಜಪಾನ್‌ನ ಪ್ಯಾರಾ ಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ವಿಭಾಗ ದಲ್ಲಿ ಭಾರತ ಒಂಬತ್ತಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಪ್ರಧಾನ ಕಾರ್ಯದರ್ಶಿ ಗುರುಶರಣ್‌ಸಿಂಗ್‌ ಹೇಳಿದರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಾರ್ಚ್‌ 26ರಿಂದ 19ನೇ ರಾಷ್ಟ್ರೀಯ ಪ್ಯಾರಾ ಅಥ್ಲೆ ಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಈ ಕುರಿತು ಬೆಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತ ಪ್ಯಾರಾಲಿಂಪಿಕ್‌ ಸಮಿತಿ ಗೋಷ್ಠಿಯನ್ನು ಆಯೋಜಿಸಿತ್ತು.

ದೇಶಾದ್ಯಂತ ಪ್ರತಿಭೆಗಳ ಹುಡುಕಾಟಕ್ಕೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ವೇದಿಕೆ ಯಾಗಿದೆ. ಪುರುಷ ಮತ್ತು ಮಹಿಳೆಯರಿಗಾಗಿ 175 ವಿಭಾಗ ಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 2020ರ ಪ್ಯಾರಾಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಲು ಭಾರತದ ಅಥ್ಲೀಟುಗಳಿಗೆ ಇದು ಕೊನೆಯ ಅರ್ಹತಾ ಟೂರ್ನಿಯಾಗಿದೆ. 2016ರ ಪ್ಯಾರಾ ಒಲಿಂಪಿಕ್ಸ್‌ನ ಹೈಜಂಪ್‌ನಲ್ಲಿ ಚಿನ್ನದ ಪದಕ ವಿಜೇತ ಮರಿಯಪ್ಪನ್‌ ತಂಗವೇಲು, ಡಿಸ್ಕಸ್‌ ಥ್ರೊ ಸ್ಪರ್ಧಿ, 2018ರ ಏಷ್ಯನ್‌ ಪ್ಯಾರಾ ಗೇಮ್ಸ್‌ನ ಚಿನ್ನ ವಿಜೇತ ಅಮಿತ್‌ ಸರೋಹ ಸೇರಿ 1000ಕ್ಕಿಂತ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊ ಳ್ಳುವ ನಿರೀಕ್ಷೆಯಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.