ADVERTISEMENT

ಪ್ಯಾರಾ ಬ್ಯಾಡ್ಮಿಂಟನ್ ವಿಜೇತರಿಗೆ ₹ 1.82 ಕೋಟಿ

ಪಿಟಿಐ
Published 27 ಆಗಸ್ಟ್ 2019, 20:27 IST
Last Updated 27 ಆಗಸ್ಟ್ 2019, 20:27 IST

ನವದೆಹಲಿ: ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದವರಿಗೆ ಒಟ್ಟು ₹ 1.82 ಕೋಟಿ ಬಹುಮಾನವನ್ನು ಕೇಂದ್ರ ಕ್ರೀಡಾ ಇಲಾಖೆಯು ಘೋಷಿಸಿದೆ.

ಈಚೆಗೆ ಸ್ವಿಟ್ಜರ್‌ಲೆಂಡ್‌ನಲ್ಲಿ ಮುಕ್ತಾಯವಾದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತದ 12 ಆಟಗಾರರು ಪದಕ ಗೆದ್ದಿದ್ದರು. ಅವರೆಲ್ಲರಿಗೂ ಮಂಗಳವಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರು ಪುರಸ್ಕಾರ ನೀಡಿ ಗೌರವಿಸಿದರು. ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದವರಿಗೆ ತಲಾ ₹20ಲಕ್ಷ, ಬೆಳ್ಳಿ ವಿಜೇತರಿಗೆ ₹ 14 ಲಕ್ಷ ಮತ್ತು ಕಂಚು ಗಳಿಸಿದವರಿಗೆ ₹ 8 ಲಕ್ಷ ನೀಡಲಾಗುತ್ತಿದೆ. ಡಬಲ್ಸ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಿಗೆ ಕ್ರಮವಾಗಿ ₹ 15, ₹10.5 ಮತ್ತು ₹ 6 ಲಕ್ಷ ನೀಡಲಾಗುತ್ತಿದೆ.

‘‍ಪ್ಯಾರಾ ವಿಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಪರಿಷ್ಕರಿಸುವ ನಿಯಮದಡಿಯಲ್ಲಿ ಈ ಪುರಸ್ಕಾರ ನೀಡಲಾಗಿದೆ. ಅವರ ಮುಂದಿನ ಭವಿಷ್ಯವನ್ನು ರೂಪಿಸಲು ಇದರಿಂದ ನೆರವಾಗಲಿದೆ’ ಎಂದು ಕಿರಣ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.