ADVERTISEMENT

ಸ್ಟೀಪಲ್‌ ಚೇಸ್‌: ಸಾಬಳೆಗೆ 11ನೇ ಸ್ಥಾನ

ಲಾಂಗ್‌ಜಂಪ್‌ ಫೈನಲ್‌ ತಲುಪುವಲ್ಲಿ ಚಿತ್ರವೇಲ್‌, ಅಬ್ದುಲ್ಲಾ ವಿಫಲ

ಪಿಟಿಐ
Published 8 ಆಗಸ್ಟ್ 2024, 15:33 IST
Last Updated 8 ಆಗಸ್ಟ್ 2024, 15:33 IST
<div class="paragraphs"><p>ಅವಿನಾಶ್‌ ಸಾಬ್ಳೆ (ಬಿಳಿ ಧಿರಿಸು) </p></div>

ಅವಿನಾಶ್‌ ಸಾಬ್ಳೆ (ಬಿಳಿ ಧಿರಿಸು)

   

–ಪಿಟಿಐ ಚಿತ್ರ

ಪ್ಯಾರಿಸ್‌: ಭಾರತದ ಅವಿನಾಶ್‌ ಸಾಬಳೆ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಪುರುಷರ 3,000 ಮೀ. ಸ್ಟೀಪಲ್‌ ಚೇಸ್‌ ಫೈನಲ್‌ ರೇಸ್‌ನಲ್ಲಿ 11ನೇ ಸ್ಥಾನ ಪಡೆದರು.

ADVERTISEMENT

ಆರಂಭದಲ್ಲಿ ಕೊಂಚ ಮುನ್ನಡೆಯಲ್ಲಿದ್ದ 29 ವರ್ಷ ವಯಸ್ಸಿನ ಸಾಬ್ಳೆ ಅವರು 8 ನಿಮಿಷ 14.18 ಸೆ.ಗಳಲ್ಲಿ ಗುರಿ ತಲುಪಿದರು. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ 8 ನಿಮಿಷ 09.91 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಸಾಬಳೆ ಉತ್ತಮಪಡಿಸಿಕೊಂಡಿದ್ದರು.

ಟೋಕಿಯೊದಲ್ಲಿ ಕೂಟದಲ್ಲಿ ಚಿನ್ನ ಗೆದ್ದಿದ್ದ ಮೊರಾಕ್ಕೊದ ಸೊಫಿಯಾನ್ ಅಲ್‌ ಬಕಾಲಿ ಅವರು ಪ್ರಶಸ್ತಿಯನ್ನು ಉಳಿಸಿಕೊಂಡರು. ಈ ಋತುವಿನಲ್ಲಿ ಶ್ರೇಷ್ಠ 8 ನಿಮಿಷ 06.05 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಅಮೆರಿಕದ ಕೆನ್ನೆತ್‌ ರೂಕ್ಸ್‌  (8 ನಿ 06.41 ಸೆ) ಮತ್ತು ಕೆನ್ಯಾದ ಅಬ್ರಹಾಮ್‌ ಕಿಬಿವೊಟ್‌ (8 ನಿ 06.47 ಸೆ) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ತಮ್ಮ ಹೆಸರಿನಲ್ಲಿ ವಿಶ್ವ ದಾಖಲೆ ಹೊಂದಿರುವ ಇಥಿಯೋಪಿಯಾದ ಲಮೆಚಾ ಗರ್ಮಾ ಟ್ರ್ಯಾಕ್‌ನಲ್ಲಿ ಬಿದ್ದಿದ್ದರಿಂದ ರೇಸ್‌ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಲಾಂಗ್‌ಜಂಪ್‌ನಲ್ಲಿ ನಿರಾಸೆ
ಭಾರತದ ಪ್ರವೀಣ್‌ ಚಿತ್ರವೇಲ್‌ (16.25 ಮೀ) ಮತ್ತು ಅಬ್ದುಲ್ಲಾ ಅಬೂಬಕ್ಕರ್‌ (16.49 ಮೀ) ಪುರುಷರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಫೈನಲ್‌ ತಲುಪಲು ವಿಫಲರಾದರು. 32 ಸ್ಪರ್ಧಿಗಳಲ್ಲಿ ಚಿತ್ರವೇಲ್‌ 27ನೇ ಮತ್ತು ಅಬ್ದುಲ್ಲಾ 21 ಸ್ಥಾನದಲ್ಲಿ ಅಭಿಯಾನ ಮುಕ್ತಾಯಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.