ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ಸ್ವಪ್ನಿಲ್‌ಗೆ ಕಂಚು; ದೇಶಕ್ಕೆ 3ನೇ ಪದಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2024, 8:32 IST
Last Updated 1 ಆಗಸ್ಟ್ 2024, 8:32 IST
<div class="paragraphs"><p>ಪದಕ ಗೆದ್ದ ಸಂಭ್ರಮದಲ್ಲಿ ಸ್ವಪ್ನಿಲ್ ಕುಸಾಲೆ</p></div>

ಪದಕ ಗೆದ್ದ ಸಂಭ್ರಮದಲ್ಲಿ ಸ್ವಪ್ನಿಲ್ ಕುಸಾಲೆ

   

–ರಾಯಿಟರ್ಸ್ ಚಿತ್ರ

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಶೂಟಿಂಗ್ ವೈಯಕ್ತಿಕ 50 ಮೀಟರ್ ವಿಭಾಗದ ರೈಫಲ್ 3 ಪೊಸಿಷನ್‌ನಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಈ ವರ್ಷ ಗೆದ್ದಿರುವ ಪದಕಗಳ ಸಂಖ್ಯೆ ಮೂರಕ್ಕೆ ಏರಿದೆ.

ADVERTISEMENT

50 ಮೀಟರ್‌ ರೈಫಲ್ 3 ಪೊಸಿಷನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನ್ನುವ ಹೆಗ್ಗಲಿಕೆ ಸ್ವಪ್ನಿಲ್ ಪಾಲಾಗಿದೆ.

ಶತೋಹು ಶೂಟಿಂಗ್ ರೇಂಜ್‌ನಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಸ್ವಪ್ನಿಲ್ ಅವರು ಏಳನೇ ಸ್ಥಾನ ಗಳಿಸಿ ಫೈನಲ್ ಪ್ರವೇಶಿಸಿದ್ದರು.

8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಕುಸಾಲೆ ಮೂರನೇ ಸ್ಥಾನ ಪಡೆದರು. 

ಮಹಿಳೆಯರ 10 ಮೀಟರ್ ಏರ್ ‍ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್‌ ಕಂಚಿನ ಪದಕ ಗೆದ್ದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು. ಮಿಶ್ರ ತಂಡದ 10 ಮೀಟರ್‌ ಏರ್‌ ಪಿಸ್ತೂಲ್‌ನಲ್ಲಿ ಮನು ಭಾಕರ್‌ ಹಾಗೂ ಸರಬ್‌ಜೊತ್‌ ಸಿಂಗ್ ಜೋಡಿ ಕಂಚು ಜಯಿಸಿತ್ತು.

ಇದೀಗ ಸ್ವಪ್ನಿಲ್ ಕಂಚಿಗೆ ಗುರಿ ಇಟ್ಟಿದ್ದಾರೆ. ಈ ವರೆಗೂ ದೇಶಕ್ಕೆ ಲಭಿಸಿದ ಮೂರೂ ಪದಕಗಳು ಶೂಟಿಂಗ್ ವಿಭಾಗದಲ್ಲೇ ಎನ್ನುವುದು ವಿಶೇಷ. ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಶೂಟಿಂಗ್ ವಿಭಾಗದಲ್ಲಿ ಮೂರು ಪದಕ ಗೆದ್ದಿರುವುದು ಕೂಡ ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.