ADVERTISEMENT

ಪ್ರಾಗ್‌ ಮಾಸ್ಟರ್ಸ್ ಚೆಸ್‌: ಪ್ರಜ್ಞಾನಂದ, ಅರವಿಂದ್‌ ಮುನ್ನಡೆ ಅಬಾಧಿತ

ಪಿಟಿಐ
Published 5 ಮಾರ್ಚ್ 2025, 12:16 IST
Last Updated 5 ಮಾರ್ಚ್ 2025, 12:16 IST
<div class="paragraphs"><p>ಪ್ರಜ್ಞಾನಂದ</p></div>

ಪ್ರಜ್ಞಾನಂದ

   

(ಪಿಟಿಐ ಚಿತ್ರ)

ಪ್ರಾಗ್ (ಝೆಕ್‌ ರಿಪಬ್ಲಿಕ್‌): ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಮತ್ತು ಅರವಿಂದ ಚಿದಂಬರಮ್ ಅವರು ಪ್ರಾಗ್ ಮಾಸ್ಟರ್ಸ್ ಚೆಸ್‌ ಟೂರ್ನಿಯ ಆರನೇ ಸುತ್ತಿನ ನಂತರವೂ, ಸಮೀಪದ ಎದುರಾಳಿಗಳಿಗಿಂತ ಒಂದು ಪಾಯಿಂಟ್‌ ಮುನ್ನಡೆ ಕಾಪಾಡಿಕೊಂಡಿದ್ದಾರೆ.

ADVERTISEMENT

ಪ್ರಜ್ಞಾನಂದ ಮತ್ತು ಅರವಿಂದ್ ತಲಾ ನಾಲ್ಕು ಪಾಯಿಂಟ್ಸ್ ಕಲೆಹಾಕಿದ್ದಾರೆ. ಪ್ರಜ್ಞಾನಂದ ಮಂಗಳವಾರ ನಡೆದ ಪಂದ್ಯದಲ್ಲಿ ಅಮೆರಿಕದ ಸ್ಯಾಮ್ ಶಂಕ್ಲಾಂಡ್ (2.5) ಜೊತೆ 43 ನಡೆಗಳಲ್ಲಿ ಡ್ರಾ ಮಾಡಿಕೊಂಡರೆ, ಅರವಿಂದ್‌ ಅವರು ವಿಯೆಟ್ನಾಮಿನ ಕ್ವಾಂಗ್ ಲೀಮ್‌ ಲಿ (3) ಜೊತೆ 32 ನಡೆಗಳ ನಂತರ ಡ್ರಾ ಮಾಡಿಕೊಂಡರು.

ಆರನೇ ಸುತ್ತಿನ ಎಲ್ಲಾ ಐದೂ ಪಂದ್ಯಗಳು ಡ್ರಾ ಆದವು. ಇನ್ನು ಮೂರು ಸುತ್ತುಗಳು ಆಡಲುಳಿದಿವೆ. 

ಅಗ್ರ ಶ್ರೇಯಾಂಕದ ವೀ ಯಿ (ಚೀನಾ), ಹಾಲೆಂಡ್‌ನ ಅನಿಶ್ ಗಿರಿ, ಜರ್ಮನಿಯ ವಿನ್ಸೆಂಟ್ ಕೀಮರ್‌ ಮತ್ತು ಕ್ವಾಂಗ್‌ ಲೀಮ್ ತಲಾ ಮೂರು ಪಾಯಿಂಟ್ಸ್ ಗಳಿಸಿದ್ದಾರೆ.

‌ಗುಯೆನ್ ಥಾಯ್ ದೈ ವಾನ್ ಮತ್ತು ಡೇವಿಡ್‌ ನವಾರ, ಟರ್ಕಿಯ ಗುರೆಲ್ ಎಡಿಝ್ ಮತ್ತು ಶಂಕ್ಲಾಂಡ್‌ ತಲಾ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.

ಪ್ರಜ್ಞಾನಂದ ಏಳನೇ ಸುತ್ತಿನಲ್ಲಿ ವೀ ಯಿ ಅವರನ್ನು, ಅರವಿಂದ್ ಅವರು, ಅನಿಶ್‌ ಅವರನ್ನು ಎದುರಿಸಲಿದ್ದಾರೆ.

ಚಾಲೆಂಜರ್ಸ್ ವಿಭಾಗದಲ್ಲಿ ದಿವ್ಯಾ ದೇಶಮುಖ್ ಅವರ ನಿರಾಶಾದಾಯಕ ಆಟ ಮುಂದುವರಿಯಿತು. ಮಹಾರಾಷ್ಟ್ರದ ಝೆಕ್‌ ರಿಪಬ್ಲಿಕ್ ಆಟಗಾರ್ತಿ ಫಿನೆಲ್‌ ವಾಕ್ಲಾವ್ (2.5) ಅವರಿಗೆ ಮಣಿದರು. ಈ ವಿಭಾಗದಲ್ಲಿ ಡೆನ್ಮಾರ್ಕ್‌ನ ಜೊನಾಸ್‌ ಬುಲ್‌ ಝೆರೆ ಮತ್ತು ಉಜ್ಬೇಕಿಸ್ತಾನದ ನೊದಿರ್ಬೆಕ್‌ ಯಾಕುಬೊಯೆವ್‌ (ತಲಾ 4.5) ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.