ADVERTISEMENT

ಚೀನಾ ಓಪನ್‌: ಮತ್ತೊಮ್ಮೆ ಬೇಗ ನಿರ್ಗಮಿಸಿದ ಸಿಂಧು

ಮೊದಲ ಸುತ್ತಿನಲ್ಲಿ ಸೋತ ಪ್ರಣಯ್‌

ಪಿಟಿಐ
Published 5 ನವೆಂಬರ್ 2019, 18:05 IST
Last Updated 5 ನವೆಂಬರ್ 2019, 18:05 IST
   

ಫುಝೌ: ವಿಶ್ವ ಚಾಂಪಿಯನ್‌ ಆದ ನಂತರ ಪಿ.ವಿ.ಸಿಂಧು ಅವರ ವೈಫಲ್ಯಗಳ ಸರಮಾಲೆ ಮುಂದುವರಿದಿದೆ. ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ ಮಂಗಳವಾರ ನಡೆದ ಚೀನಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನಲ್ಲೇ ಚೀನಾ ತೈಪಿ ಆಟಗಾರ್ತಿಗೆ ಮಣಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿರುವ ಪೈಯು ಪೊ 21–13, 18–21, 21–19 ರಿಂದ ಸಿಂಧು ವಿರುದ್ಧ 74 ನಿಮಿಷಗಳಲ್ಲಿ ಜಯಗಳಿಸಿದರು. ಕೊರಿಯಾ, ಡೆನ್ಮಾರ್ಕ್‌ ಓಪನ್‌ ಟೂರ್ನಿಗಳಲ್ಲೂ ಸಿಂಧು ಬೇಗನೇ ನಿರ್ಗಮಿಸಿದ್ದರು.

ಆದರೆ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಆಶ್ವಿನಿ ಪೊನ್ನಪ್ಪ ಅವರು ಮಿಕ್ಸಡ್‌ ಡಬಲ್ಸ್‌ ಮೊದಲ ಸುತ್ತಿನಲ್ಲಿ ಕೆನಡಾದ ಜೋಶುವಾ ಹರ್ಲ್‌ಬರ್ಟ್‌ ಯು–ಜೋಶೆಫಿನ್‌ ವು ಜೋಡಿಯನ್ನು 21–9, 21–19 ರಿಂದ ಸೋಲಿಸಿ ಶುಭಾರಂಭ ಮಾಡಿದರು. ಭಾರತದ ಈ ಜೋಡಿ ವಿಶ್ವ ಕ್ರಮಾಂಕದಲ್ಲಿ 30ನೇ ಸ್ಥಾನದಲ್ಲಿದೆ.

ADVERTISEMENT

ಇತ್ತೀಚೆಗೆ ಡೆಂಗಿ ಜ್ವರದಿಂದ ಚೇತರಿಸಿಕೊಂಡ ಎಚ್‌.ಎಸ್‌.ಪ್ರಣಯ್‌, ಪುರುಷರ ಸಿಂಗಲ್ಸ್‌ನಲ್ಲಿ 17–21, 18–21 ರಲ್ಲಿ ನೇರ ಆಟಗಳಿಂದ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಅವರಿಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.