ADVERTISEMENT

ಬೆಳಗಾವಿಯ ಪ್ರಥ್ವಿರಾಜ್‌ ‘ಮಿಸ್ಟರ್‌ ವಿಟಿಯು‘

ವಿಟಿಯು ಅಂತರ್ ಕಾಲೇಜು ದೇಹದಾರ್ಢ್ಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:59 IST
Last Updated 15 ಅಕ್ಟೋಬರ್ 2019, 19:59 IST

ಆನೇಕಲ್: ಬೆಳಗಾವಿ ಕೆಎಲ್‌ಇ ಕಾಲೇಜಿನ ಪೃಥ್ವಿರಾಜ್,ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ತಾಲ್ಲೂಕಿನ ಗುಡ್ಡನಹಳ್ಳಿ ಸಮೀಪದ ಸಾಯಿರಾಮ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತರ್‌ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ‘ಮಿಸ್ಟರ್‌ ವಿಟಿಯು’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬೆಸ್ಟ್‌ ಪೋಸರ್‌ ಪ್ರಶಸ್ತಿಗೆ, ಉಡುಪಿ ಜಿಲ್ಲೆಯ ಎನ್‌ಎಂಎಎಂ ತಾಂತ್ರಿಕ ವಿದ್ಯಾಲಯದ ಪೃಥ್ವಿರಾಜ್‌ ಪಿ.ಹೆಗ್ಡೆ ಭಾಜನರಾಗಿದ್ದಾರೆ. ಅತ್ಯುತ್ತಮ ದೇಹದಾರ್ಢ್ಯ ಪ್ರಶಸ್ತಿಗೆ ಬೆಂಗಳೂರಿನ ಜೆಸಿಇ ಕಾಲೇಜಿನ ರೂಪೇಶ್‌ ಚೌಹಾಣ್‌ ಆಯ್ಕೆಯಾಗಿದ್ದಾರೆ.

ಉಡುಪಿಯ ಎನ್ಎಂಎಎಂ ತಾಂತ್ರಿಕ ವಿದ್ಯಾಲಯ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ‌

ADVERTISEMENT

ಮಹಿಳೆಯರ ವಿಭಾಗದಲ್ಲಿ ಸಾಯಿರಾಮ್‌ ತಾಂತ್ರಿಕ ಮಹಾವಿದ್ಯಾಲಯದ ಜಿ.ಎನ್‌.ಸ್ವಾತಿ, ಚೇತನಾ, ಕುಮೆತಾ ಶೈಲೀಲಾ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಎರಡು ದಿನಗಳ ಕಾಲ ನಡೆದ ಸ್ಪರ್ಧೆಗಳಲ್ಲಿ 47 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಗಳಾಗಿದ್ದರು. ವಿಟಿಯು ಬೆಂಗಳೂರು ದಕ್ಷಿಣ ವಲಯ ಪ್ರಾದೇಶಿಕ ನಿರ್ದೇಶಕ ಆರ್‌.ಸರವಣನ್‌, ದೈಹಿಕ ಶಿಕ್ಷಣ ನಿರ್ದೇಕರಾದ ಚಿಕ್ಕರಂಗಸ್ವಾಮಿ, ಡಾ.ರಾಜೇಶ್‌, ಡಾ.ಪ್ರಕಾಶ್‌, ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಡಾ.ಅರುಣ್‌ಕುಮಾರ್‌, ಟ್ರಸ್ಟಿ ಪಟೇಲ್, ಪ್ರಾಚಾರ್ಯ ಡಾ.ಬಿ.ಷಡಾಕ್ಷರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.