ADVERTISEMENT

‘ಚಾಂಪಿಯನ್‌ ಪಟ್ಟಕ್ಕೆ ತೀವ್ರ ಪೈಪೋಟಿ’

ಬೆಂಗಳೂರು ಬುಲ್ಸ್ ಕೋಚ್‌ ರಣಧೀರ ಸಿಂಗ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 20:00 IST
Last Updated 3 ಸೆಪ್ಟೆಂಬರ್ 2019, 20:00 IST
ಪ್ರೊ ಕಬಡ್ಡಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವಿಧ ತಂಡಗಳ ಆಟಗಾರರು ಜೊತೆಯಾಗಿ ಕಾಣಿಸಿಕೊಂಡರು. (ಎಡದಿಂದ) ತೆಲುಗು ಟೈಟನ್ಸ್‌ನ ಸಿದ್ದಾರ್ಥ್‌ ದೇಸಾಯಿ, ಬೆಂಗಳೂರು ಬುಲ್ಸ್‌ನ ಪವನ್‌ ಶೆರಾವತ್‌, ದಬಂಗ್‌ ಡೆಲ್ಲಿಯ ನವೀನ್‌ ಕುಮಾರ್‌, ಪಟ್ನಾ ಪೈರೇಟ್ಸ್‌ನ ಪ್ರದೀಪ್‌ ನರ್ವಾಲ್‌, ದಬಂಗ್‌ ಡೆಲ್ಲಿಯ ಜೋಗಿಂದರ್‌ ನರ್ವಾಲ್‌, ಯು ಮುಂಬಾದ ಫಜಲ್‌ ಅತ್ರಾಚಲಿಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ಏಳನೇ ಋತುವಿನ ಪ್ರೊ ಕಬಡ್ಡಿ ಲೀಗ್‌ ತೀವ್ರ ಪೈಪೋಟಿಯಿಂದ ಕೂಡಿದೆ. ಯಾರು ಚಾಂಪಿಯನ್‌ ಆಗುತ್ತಾರೆ ಎಂಬುದನ್ನು ಊಹಿಸಲು ಆಗುತ್ತಿಲ್ಲ ಎಂದು ಬೆಂಗಳೂರು ಬುಲ್ಸ್ ತಂಡದ ಕೋಚ್‌ ರಣಧೀರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಲೀಗ್‌ನ ಅರ್ಧದಷ್ಟು ಪಂದ್ಯಗಳು ಮುಕ್ತಾಯವಾಗಿದ್ದು, ಈ ಕುರಿತು ಚರ್ಚಿಸಲು ಮಂಗಳವಾರ ನಗರದಲ್ಲಿ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಆಟವಾಗಿರುವ ಕಬಡ್ಡಿಯು, ಪ್ರೊ ಕಬಡ್ಡಿ ಲೀಗ್‌ನಿಂದಾಗಿ ವಿಶ್ವಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ ಎಂದರು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಕೋಚ್‌ ಶ್ರೀನಿವಾಸರೆಡ್ಡಿ ಮಾತನಾಡಿ, ಈ ಋತುವಿನಲ್ಲಿ ರೈಡರ್‌ಗೆ ಸಿಗುವಷ್ಟೇ ಮಹತ್ವ ಡಿಫೆಂಡರ್‌ಗಳಿಗೂ ಸಿಗುತ್ತಿದೆ. ಸ್ಪರ್ಧೆ ಕಠಿಣವಾಗುತ್ತಿದೆ.60ಕ್ಕಿಂತ ಹೆಚ್ಚು ಪಾಯಿಂಟ್‌ ಗಳಿಸಿದ ತಂಡಗಳು ಪ್ಲೇ ಆಫ್‌ ಹಂತಕ್ಕೇರುವ ಸಾಧ್ಯತೆಗಳಿವೆ ಎಂದರು.

ADVERTISEMENT

ಕೋಚ್‌ಗಳಾದ ತಂಡದ ಅನೂಪ್‌ ಕುಮಾರ್‌ (ಪುಣೇರಿ ಪಲ್ಟನ್‌), ಗೋಲಮ್‌ ರೆಝಾ (ತೆಲುಗು ಟೈಟನ್ಸ್‌), ವಿವಿಧ ತಂಡಗಳ ಆಟಗಾರರಾದ ಪವನ್‌ ಶೆರಾವತ್‌, ಸಿದ್ಧಾರ್ಥ್ ದೇಸಾಯಿ, ನವೀನ್‌ ಕುಮಾರ್‌, ಪ್ರದೀಪ್‌ ನರ್ವಾಲ್‌, ಫಜಲ್‌ ಅತ್ರಾಚಲಿ, ಜೋಗಿಂದರ್‌ ನರ್ವಾಲ್‌, ವಿಶಾಲ್‌ ಮಾನೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ಇಂದಿನ ಪಂದ್ಯಗಳು

ಜೈಪುರ ಪಿಂಕ್‌ ಪ್ಯಾಂಥರ್ಸ್‌- ದಬಂಗ್‌ ಡೆಲ್ಲಿ: ರಾತ್ರಿ 7:30

ಬೆಂಗಳೂರು ಬುಲ್ಸ್-ಪಟ್ನಾ ಪೈರೇಟ್ಸ್: ರಾತ್ರಿ 8:30.
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.