ADVERTISEMENT

ಪ್ರೊ ಕಬಡ್ಡಿ ಲೀಗ್‌: ಬುಲ್ಸ್ ಪಳಗಿಸಿದ ಯೋಧಾ

ಡೆಲ್ಲಿ–ಯು ಮುಂಬಾ ಸಮಬಲ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 18:35 IST
Last Updated 11 ಅಕ್ಟೋಬರ್ 2019, 18:35 IST
ಯು ಮುಂಬಾ ತಂಡದ ಅಭಿಷೇಕ್ ಪಾಯಿಂಟ್‌ ಗಳಿಸಲು ಯತ್ನಿಸಿದರು
ಯು ಮುಂಬಾ ತಂಡದ ಅಭಿಷೇಕ್ ಪಾಯಿಂಟ್‌ ಗಳಿಸಲು ಯತ್ನಿಸಿದರು   

ಗ್ರೇಟರ್‌ ನೊಯ್ಡಾ: ವಿರಾಮದ ನಂತರ ಚೇತರಿಸಿಕೊಂಡ ಯು.ಪಿ.ಯೋಧಾ ತಂಡ ಪ್ರೊ ಕಬಡ್ಡಿ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ 45–33 ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್‌ ತಂಡವನ್ನು ಸೋಲಿಸಿತು.

ಶಹೀದ್ ವಿಜಯ್‌ ಸಿಂಗ್‌ ಪಥಿಕ್‌ ಕ್ರೀಡಾಂಗಣದಲ್ಲಿ ವಿರಾಮದ ವೇಳೆ ಬುಲ್ಸ್ 22–20 ಪಾಯಿಂಟ್‌ಗಳಿಂದ ಮುಂದಿತ್ತು. ಯೋಧಾ ರೇಡರ್‌ಗಳಾದ ಶ್ರೀಕಾಂತ್‌ ಜಾಧವ್‌ ಮತ್ತು ಸುರೇಂದರ್‌ ಗಿಲ್‌ ತಲಾ 9 ಪಾಯಿಂಟ್‌ ಗಳಿಸಿದರು.ಪಂದ್ಯದ 14ನೇ ನಿಮಿಷ ಬೋನಸ್‌ ಪಾಯಿಂಟ್‌ ಪಡೆಯುವ ಮೂಲಕ ಶ್ರೀಕಾಂತ್‌ ಜಾಧವ್‌ ಪ್ರೊ ಕಬಡ್ಡಿಯಲ್ಲಿ 400 ಪಾಯಿಂಟ್ಸ್‌ ಪೂರೈಸಿದ ಸಾಧನೆಗೆ ಪಾತ್ರರಾದರು.

ಬುಲ್ಸ್‌ ತಂಡದ ಪ್ರಮುಖ ರೈಡರ್‌ ಪವನ್‌ ಶೆರವಾತ್‌ 13 ಅಂಕ ಗಳಿಸಿದರು. ಆದರೆ ಅವರಿಗೆ ಉಳಿದವರಿಂದ ಸೂಕ್ತ ಬೆಂಬಲ ಸಿಗಲಿಲ್ಲ.

ADVERTISEMENT

ಇನ್ನೊಂದು ಪಂದ್ಯ ಟೈ: ಕೊನೆಯ ಹಂತದ ಒತ್ತಡವನ್ನು ಮೆಟ್ಟಿನಿಂತ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ದಬಂಗ್‌ ಡೆಲ್ಲಿ ವಿರುದ್ಧ 37–37ರಿಂದ ಟೈ ಸಾಧಿಸಲು ಯಶಸ್ವಿಯಾಯಿತು.

ಡೆಲ್ಲಿ ಪರ ‘ಸೂಪರ್‌ ನವೀನ್‌ 12 ಪಾಯಿಂಟ್‌ ಗಳಿಸಿ ದರು. ಮುಂಬಾ ತಂಡದ ಪರ ಅಂತಹದೇ ಸಾಮರ್ಥ್ಯ ತೋರಿದ ಅಭಿಷೇಕ್‌ ಸಿಂಗ್‌ 10 ಹಾಗೂ ಅರ್ಜುನ್‌ ದೇಸ್ವಾಲ್‌ 9 ಪಾಯಿಂಟ್ಸ್ ದಾಖಲಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.