ADVERTISEMENT

Pro Kabaddi League: ತಲೈವಾಸ್‌ಗೆ ಭರ್ಜರಿ ಗೆಲುವು

ಪಿಟಿಐ
Published 18 ಡಿಸೆಂಬರ್ 2024, 21:48 IST
Last Updated 18 ಡಿಸೆಂಬರ್ 2024, 21:48 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌</p></div>

ಪ್ರೊ ಕಬಡ್ಡಿ ಲೀಗ್‌

   

ಪುಣೆ: ಹಿಮಾಂಶು ಮತ್ತು ಮೊಯಿನ್ ಶಾಫಾಘಿ ಅಮೋಘ ರೇಡಿಂಗ್‌ ನೆರವಿನಿಂದ ತಮಿಳ್‌ ತಲೈವಾಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 60–29ರಿಂದ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಗೆಲುವು ಸಾಧಿಸಿತು. ‌

ಬುಧವಾರ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಪಾರಮ್ಯ ಮೆರೆದ ತಲೈವಾಸ್‌ ವಿರಾಮದ ವೇಳೆ 25–13ರಿಂದ ಮುನ್ನಡೆ ಪಡೆದಿತ್ತು. ನಂತರವೂ ಚುರುಕಿನ ಆಟವಾಡಿದ ತಂಡವು ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು.

ADVERTISEMENT

ಹಿಮಾಂಶು ಮತ್ತು ಮೊಯಿನ್‌ ತಲಾ 13 ಅಂಕ ಸಂಪಾದಿಸಿದರು. ಅವರಿಗೆ ಡಿಫೆಂಡರ್‌ ನಿತೇಶ್‌ ಕುಮಾರ್‌ (7) ಸಾಥ್‌ ನೀಡಿದರು. ವಾರಿಯರ್ಸ್‌ ಪರ ಮನ್‌ಜಿತ್‌ 7 ‍ಪಾಯಿಂಟ್ಸ್‌ ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ 41–37ರಿಂದ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು. ದೇವಾಂಕ್‌ 14 ಅಂಕ ಸಂಪಾದಿಸಿ ಗೆಲುವಿನ ರೂವಾರಿಯಾದರು. ಟೈಟನ್ಸ್‌ ಪರ ಪವನ್‌ ಸೆಹ್ರಾವತ್ ಮತ್ತು ವಿಜಯ್‌ ಮಲಿಕ್‌ ತಲಾ 9 ಅಂಕ ತಂದಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.