ADVERTISEMENT

ಪ್ರೊ ಕಬಡ್ಡಿ: ಮುಂಬೈಗೆ ಯೋಧಾ ಸವಾಲು

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:45 IST
Last Updated 30 ಜುಲೈ 2019, 19:45 IST
ಯು ಮುಂಬಾ ತಂಡ ರೇಡಿಂಗ್‌ ಮತ್ತು ಡಿಫೆನ್ಸ್‌ನಲ್ಲಿ ಪ್ರಭಾವಿ ಆಟವಾಡಬಲ್ಲ ಸಾಮರ್ಥ್ಯ ಹೊಂದಿದೆ
ಯು ಮುಂಬಾ ತಂಡ ರೇಡಿಂಗ್‌ ಮತ್ತು ಡಿಫೆನ್ಸ್‌ನಲ್ಲಿ ಪ್ರಭಾವಿ ಆಟವಾಡಬಲ್ಲ ಸಾಮರ್ಥ್ಯ ಹೊಂದಿದೆ   

ಮುಂಬೈ: ಆತಿಥೇಯ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನ ತನ್ನ ಐದನೇ ಪಂದ್ಯದಲ್ಲಿ ಬುಧವಾರ ಯು.ಪಿ.ಯೋಧಾವನ್ನು ಎದುರಿಸಲಿದೆ. ಇಲ್ಲಿನ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಅಂಗಣದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಕಣಕ್ಕೆ ಇಳಿಯಲಿರುವ ತಂಡ ಕಳೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಎದುರು ಅನುಭವಿಸಿದ ಸೋಲಿನ ನಿರಾಸೆಯಿಂದ ಹೊರಬರಲು ಪ್ರಯತ್ನಿಸಲಿದೆ.

ಯು ಮುಂಬಾ ನಾಲ್ಕು ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಮಾತ್ರ ಗೆದ್ದಿದೆ. ಅತ್ತ ಯು.ಪಿ.ಯೋಧಾ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿದೆ. ಈ ತಂಡ ಮೊದಲ ಜಯದ ನಿರೀಕ್ಷೆಯಲ್ಲಿದೆ.

ರೇಡರ್‌ಗಳಾದ ಅಭಿಷೇಕ್ ಸಿಂಗ್ ಮತ್ತು ರೋಹಿತ್ ಬಲಿಯಾನ್ ಮುಂಬಾ ತಂಡದ ಬಲವಾಗಿದ್ದು ನಿರ್ಣಾಯಕ ಹಂತಗಳಲ್ಲಿ ಫಲಿತಾಂಶ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಅರ್ಜುನ್ ದೇಶ್ವಾಲ್ ಕೂಡ ತಂಡದಲ್ಲಿದ್ದಾರೆ.

ADVERTISEMENT

ಯು.ಪಿ.ಯೋಧಾ ಈಗ ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಮೋನು ಗೋಯತ್ ಮತ್ತು ಶ್ರೀಕಾಂತ್ ಜಾಧವ್ ಅವರಂಥ ಪ್ರಭಾವಿ ಆಟಗಾರರನ್ನು ಹೊಂದಿರುವ ತಂಡದ ಡಿಫೆನ್ಸ್ ವಿಭಾಗದಲ್ಲಿ ನಾಯಕ ನಿತೇಶ್ ಕುಮಾರ್ ತ್ರಿಮೂರ್ತಿಗಳಾದ ಸುಮಿತ್, ಅಮಿತ್ ಮತ್ತು ನರೇಂದರ್ ಇದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಆಡದೇ ಇದ್ದ ರಿಷಾಂಕ್ ದೇವಾಡಿಗ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಜೈಪುರಕ್ಕೆ ತಡೆ ಹಾಕುವುದೇ ಹರಿಯಾಣ?: ಟೂರ್ನಿಯಲ್ಲಿ ಆಜೇಯ ಓಟ ಮುಂದುವರಿಸಿರುವ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವನ್ನು ಹರಿಯಾಣ ಸ್ಟೀಲರ್ಸ್ ಎದುರಿಸಲಿದೆ. ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದ್ದು ಹರಿಯಾಣ ಒಂದರಲ್ಲಿ ಗೆದ್ದು ಮತ್ತೊಂದನ್ನು ಸೋತಿದೆ.

ನಾಯಕ ದೀಪಕ್ ನಿವಾಸ್ ಹೂಡ ಪರಿಣಾಮಕಾರಿ ರೇಡಿಂಗ್ ಮೂಲಕ ಜೈಪುರ ಪರ ಮಿಂಚುತ್ತಿದ್ದು ಡಿಫೆನ್ಸ್ ವಿಭಾಗದಲ್ಲಿ ಸಂದೀಪ್ ಧುಲ್ ಮತ್ತು ಅಮಿತ್ ಹೂಡಾ ಇದ್ದಾರೆ. ಹರಿಯಾಣ ತಂಡ ನಾಯಕ ಧರ್ಮರಾಜ ಚೇರಲಾತನ್ ಮೇಲೆ ಭರವಸೆ ಇರಿಸಿಕೊಂಡಿದೆ

‌ಇಂದಿನ ಪಂದ್ಯಗಳು

ಜೈಪುರ ಪಿಂಕ್ ಪ್ಯಾಂಥರ್ಸ್‌–ಹರಿಯಾಣ ಸ್ಟೀಲರ್ಸ್‌

ಆರಂಭ: ಸಂಜೆ 7.30

ಯು ಮುಂಬಾ – ಯು.ಪಿ.ಯೋಧಾ

ಆರಂಭ: ರಾತ್ರಿ 8.30

ಸ್ಥಳ: ಎನ್‌ಎಸ್‌ಸಿಐ, ಮುಂಬೈ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.