
ಮಂಗಳೂರು: ಪಂಜಾಬ್, ವಿದ್ಯಾಭಾರತಿ, ಛತ್ತೀಸ್‌ಗಢ ಮತ್ತು ಬಿಹಾರ ಬಾಲಕರ ತಂಡಗಳು ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಪಿಲಿಕುಳದಲ್ಲಿ ನಡೆಯುತ್ತಿರುವ ಟೂರ್ನಿಯ 16ರ ಘಟ್ಟದ ಪಂದ್ಯಗಳಲ್ಲಿ ಆಂಧ್ರಪ್ರದೇಶ ತಂಡವನ್ನು ಪಂಜಾಬ್ 35–12ರಲ್ಲಿ ಮಣಿಸಿದರೆ ಛತ್ತೀಸ್‌ಗಡ 39–13ರಲ್ಲಿ ಐಪಿಎಸ್‌ಇ ವಿರುದ್ಧ ಜಯ ಸಾಧಿಸಿತು.
ಹರಿಯಾಣ ವಿರುದ್ಧದ ಪಂದ್ಯದಲ್ಲಿ ವಿದ್ಯಾಭಾರತಿ 37–27ರಲ್ಲಿ ಗೆಲುವು ದಾಖಲಿಸಿದರೆ ತೆಲಂಗಾಣವನ್ನು ಬಿಹಾರ್ 36–18ರಲ್ಲಿ ಮಣಿಸಿತು. ಲೀಗ್ ಪಂದ್ಯಗಳಲ್ಲಿ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡಗಳು ಗೆಲುವಿನ ಓಟ ಮುಂದುವರಿಸಿದವು.
ಶನಿವಾರದ ಲೀಗ್ ಪಂದ್ಯಗಳ ಫಲಿತಾಂಶಗಳು: ಬಾಲಕರು: ಕರ್ನಾಟಕಕ್ಕೆ ಪಂಜಾಬ್ ವಿರುದ್ಧ 24–22ರಲ್ಲಿ ಜಯ; ಗುಜರಾತ್‌ಗೆ ತಮಿಳುನಾಡು ವಿರುದ್ಧ 23–19ರಲ್ಲಿ, ಬಿಹಾರಕ್ಕೆ ಜಮ್ಮು ಕಾಶ್ಮೀರ ವಿರುದ್ಧ 23–8ರಲ್ಲಿ, ಆಂಧ್ರಪ್ರದೇಶಕ್ಕೆ ಗುಜರಾತ್ ಎದುರು 23–11ರಲ್ಲಿ, ಐಪಿಎಸ್‌ಸಿಗೆ ತಮಿಳುನಾಡು ಎದುರು 16–11ರಲ್ಲಿ ಗೆಲುವು; ದೆಹಲಿ ಮತ್ತು ಚಂಡೀಗಢ ನಡುವಿನ ಪಂದ್ಯ 21–21ರಲ್ಲಿ ಸಮ.
ಬಾಲಕಿಯರು: ಕರ್ನಾಟಕಕ್ಕೆ ಆಂಧ್ರಪ್ರದೇಶ ವಿರುದ್ಧ 12–4ರಲ್ಲಿ ಗೆಲುವು; ಮಧ್ಯಪ್ರದೇಶಕ್ಕೆ ಗುಜರಾತ್ ವಿರುದ್ಧ 15–11, ಮಹಾರಾಷ್ಟ್ರಕ್ಕೆ ತಮಿಳುನಾಡು ವಿರುದ್ಧ 30–2ರಲ್ಲಿ, ಪಂಜಾಬ್‌ಗೆ ರಾಜಸ್ತಾನ ವಿರುದ್ಧ 20–18ರಲ್ಲಿ, ಕೇರಳಕ್ಕೆ ಮಧ್ಯಪ್ರದೇಶ ವಿರುದ್ಧ 39–3ರಲ್ಲಿ, ಛತ್ತೀಸ್‌ಗಢಕ್ಕೆ ಗೋವಾ ವಿರುದ್ಧ 28–17ರಲ್ಲಿ, ಪಂಜಾಬ್‌ಗೆ ಒಡಿಶಾ ವಿರುದ್ಧ 18–3ರಲ್ಲಿ, ಚಂಡೀಗಢಕ್ಕೆ ಜಮ್ಮು ಕಾಶ್ಮೀರ ವಿರುದ್ಧ 16–10ರಲ್ಲಿ, ಬಿಹಾರಕ್ಕೆ ತೆಲಂಗಾಣ ವಿರುದ್ಧ 25–4ರಲ್ಲಿ, ಕೇರಳಕ್ಕೆ ಗುಜರಾತ್ ವಿರುದ್ಧ 24–1ರಲ್ಲಿ ಮತ್ತು ಹರಿಯಾಣಕ್ಕೆ ವಿದ್ಯಾಭಾರತಿ ವಿರುದ್ಧ 20–2ರಲ್ಲಿ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.