ADVERTISEMENT

ಫ್ರೆಂಚ್ ಓಪನ್ ಟೂರ್ನಿ: ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ಸಿಂಧು

ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್‌–ಚಿರಾಗ್ ಕ್ವಾರ್ಟರ್‌ಫೈನಲ್‌ಗೆ

ಪಿಟಿಐ
Published 29 ಅಕ್ಟೋಬರ್ 2021, 12:49 IST
Last Updated 29 ಅಕ್ಟೋಬರ್ 2021, 12:49 IST
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಅವರು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು 21-19, 21-9ರಿಂದ ಲೈನ್‌ ಕ್ರಿಸ್ಟಾಫರ್ಸನ್ ಸವಾಲು ಮೀರಿದರು.

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಭಾರತ ಆಟಗಾರ್ತಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಆಟಗಾರ್ತಿಯನ್ನು ಮಣಿಸಲು 37 ನಿಮಿಷಗಳು ಸಾಕಾದವು.

ADVERTISEMENT

ಸಿಂಧು ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ 8ನೇ ಶ್ರೇಯಾಂಕದ ಆಟಗಾರ್ತಿ ಬುಸಾನನ್‌ ಒಂಗ್‌ಬಮ್ರುಂಗಪನ್‌ ಅವರನ್ನು ಎದುರಿಸಲಿದ್ದಾರೆ. ಕಳೆದ ವಾರ ನಡೆದ ಡೆನ್ಮಾರ್ಕ್‌ ಓಪನ್ ಟೂರ್ನಿಯಲ್ಲಿ ಸಿಂಧು ಅವರು ಬುಸಾನನ್‌ಗೆ ಸೋಲುಣಿಸಿದ್ದರು.

ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ಶೆಟ್ಟಿ ಅವರು ಜಿದ್ದಾಜಿದ್ದಿನ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 15-21, 21-10, 21-19ರಿಂದ ಭಾರತದವರೇ ಆದ ಎಂ.ಆರ್‌.ಅರ್ಜುನ್‌– ಧೃವ ಕಪಿಲ ಅವರನ್ನು ಮಣಿಸಿದರು. ಮುಂದಿನ ಪಂದ್ಯದಲ್ಲಿ ಈ ಜೋಡಿಯು ಮಲೇಷ್ಯಾದ ಆ್ಯರೋನ್‌ ಚಿಯಾ– ಸೋ ವೋಯಿ ಯಿಕ್ ಅವರಿಗೆ ಮುಖಾಮುಖಿಯಾಗಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಸೌರಭ್‌ ವರ್ಮಾ ಸವಾಲು ಅಂತ್ಯವಾಯಿತು. ಎರಡನೇ ಸುತ್ತಿನ ಸೆಣಸಾಟದಲ್ಲಿ ಅವರು 12–21, 9–21ರಿಂದ ಜಪಾನ್‌ ಕೆಂಟಾ ನಿಶಿಮೊಟೊ ಎದುರು ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.