ADVERTISEMENT

ಕಾಂಜೀವರಂ ಲೆಹೆಂಗಾದಲ್ಲಿ ಪಿ.ವಿ. ಸಿಂಧು ಮಸ್ತ್ ನೃತ್ಯ: ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2021, 12:03 IST
Last Updated 8 ನವೆಂಬರ್ 2021, 12:03 IST
ಪಿ.ವಿ. ಸಿಂಧು ಇನ್‌ಸ್ಟಾಗ್ರಾಮ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಪಿ.ವಿ. ಸಿಂಧು ಇನ್‌ಸ್ಟಾಗ್ರಾಮ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ನವದೆಹಲಿ: ದೇಶದ ಮೂರನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸ್ವೀಕರಿಸಿದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ದೀಪಾವಳಿ ಆಚರಣೆಯ ವಿಡಿಯೊಯೊಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಹಾಡೊಂದಕ್ಕೆ 26 ವರ್ಷದ ಆಟಗಾರ್ತಿ ಹೆಜ್ಜೆ ಹಾಕಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂಜಿವರಂ ಲೆಹೆಂಗಾ ಉಡುಪನ್ನು ಧರಿಸಿರುವ ಸಿಂಧು ಪ್ರಸಿದ್ಧ ಲವ್ ವಾಂಟಿಟಿ ಹಾಡಿಗೆ ಸಂತಸದಿಂದ ನೃತ್ಯ ಮಾಡಿದ್ಧಾರೆ.

ದೀಪಾವಳಿ ಸಂಭ್ರಮಾಚರಣೆಯ ಸರಣಿ ಪೋಸ್ಟ್‌ಗಳಲ್ಲಿ ನೃತ್ಯದ ತುಣುಕನ್ನೂ ಅವರು ಹಂಚಿಕೊಂಡಿದ್ದಾರೆ. ಭಾನುವಾರ ಪೋಸ್ಟ್ ಮಾಡಲಾದ ವಿಡಿಯೊಗೆ ಒಂದು ದಿನದ ಅಂತರದಲ್ಲಿ 12 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ.

ADVERTISEMENT

ಸಾಂಪ್ರದಾಯಿಕ ನೃತ್ಯ, ಲವ್ ಮ್ಯೂಸಿಕ್ ಮುಂತಾದ ಹ್ಯಾಶ್ ಟ್ಯಾಗ್ ಕೊಟ್ಟಿರುವ ಸಿಂಧು, ದೀಪಗಳ ಎಮೋಜಿಗಳನ್ನು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.