ADVERTISEMENT

ಬ್ಯಾಡ್ಮಿಂಟನ್‌: ಕ್ಯೂಪಿಎಲ್‌ 2ನೇ ಆವೃತ್ತಿಗೆ ಚಾಲನೆ

ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಹುಬ್ಬಳ್ಳಿ ಕ್ವೀನ್ಸ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 16:08 IST
Last Updated 10 ನವೆಂಬರ್ 2025, 16:08 IST
ಫೀಬಾ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಕ್ವೀನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಬ್ಯಾಸ್ಕೆಟ್‌ಬಾಲ್‌ ಆಟದ ಬಗ್ಗೆ ಮಾರ್ಗದರ್ಶನ ನೀಡಿದರು.
ಫೀಬಾ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಕ್ವೀನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಬ್ಯಾಸ್ಕೆಟ್‌ಬಾಲ್‌ ಆಟದ ಬಗ್ಗೆ ಮಾರ್ಗದರ್ಶನ ನೀಡಿದರು.    

ಬೆಂಗಳೂರು: ಬಹುನಿರೀಕ್ಷಿತ ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ನ (ಕ್ಯೂಪಿಎಲ್‌) ಎರಡನೇ ಆವೃತ್ತಿಯು ಬೆಂಗಳೂರು ನಗರ ವಿಶ್ವವಿದ್ಯಾಲಯದ ಆವರಣದಲ್ಲಿರುವ ಬೇಸ್‌ ಕ್ಯಾಂಪ್‌ನಲ್ಲಿ ಸೋಮವಾರ ಆರಂಭಗೊಂಡಿತು. ಮೊದಲ ದಿನದಂದು ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌ ಹಾಗೂ ಪಿಕಲ್‌ಬಾಲ್‌ ಪಂದ್ಯಗಳು ನಡೆದವು.

ಕೆಎನ್ಎಸ್‌ ಇನ್‌ಫ್ರಾ ಪ್ರಸ್ತುತಪಡಿಸುತ್ತಿರುವ ‌ಈ ಲೀಗ್‌ಗೆ, ಫೀಬಾ ಏಷ್ಯಾ ಅಧ್ಯಕ್ಷ ಹಾಗೂ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್‌ ಅವರು ಅಧಿಕೃತ ಚಾಲನೆ ನೀಡಿದರು. ಕ್ಯೂಪಿಎಲ್‌ ಸಂಸ್ಥಾಪಕ ಮಹೇಶ್‌ ಕುಮಾರ್ ಜೆ. ಹಾಗೂ ನಟ ಪ್ರಮೋದ್‌ ಶೆಟ್ಟಿ ಅವರು ಈ ವೇಳೆ ಉಪಸ್ಥಿತರಿದ್ದರು.

ಬ್ಯಾಡ್ಮಿಂಟನ್‌ ಸ್ಪರ್ಧೆಯ ಫೈನಲ್‌ನಲ್ಲಿ ಹುಬ್ಬಳ್ಳಿ ಕ್ವೀನ್ಸ್‌ ತಂಡವು ಶಿವಮೊಗ್ಗ ಕ್ವೀನ್ಸ್‌ ತಂಡವನ್ನು ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ADVERTISEMENT

ಬೌಲಿಂಗ್‌, ಗೋ ಕಾರ್ಟಿಂಗ್‌ ಹಾಗೂ ಲೇಸರ್‌ ಟ್ಯಾಗ್‌ ಸ್ಪರ್ಧೆಗಳು ಮಾರತ್ತಹಳ್ಳಿಯ ಇ–ಝೋನ್‌ನಲ್ಲಿ ಮಂಗಳವಾರ ನಡೆಯಲಿವೆ.

ಸಿನಿಮಾ ತಾರೆಯರ ನಾಯಕತ್ವದ 10 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಒಟ್ಟು 12 ವಿಧದ ಆಟಗಳನ್ನು ಆಡಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.