ADVERTISEMENT

ಬೆಂಗಳೂರು ರ‍್ಯಾಪ್ಟರ್ಸ್ ಪ್ರತಿಭಾ ಶೋಧ 19ರಿಂದ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 14:33 IST
Last Updated 8 ನವೆಂಬರ್ 2020, 14:33 IST
ಬೆಂಗಳೂರು ರ‍್ಯಾಪ್ಟರ್ಸ್‌ ನಾಯಕ ಕಿದಂಬಿ ಶ್ರೀಕಾಂತ್ –ಪ್ರಜಾವಾಣಿ ಚಿತ್ರ
ಬೆಂಗಳೂರು ರ‍್ಯಾಪ್ಟರ್ಸ್‌ ನಾಯಕ ಕಿದಂಬಿ ಶ್ರೀಕಾಂತ್ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರೀಮಿಯರ್ಬ್ಯಾಡ್ಮಿಂಟನ್ ಲೀಗ್‌ (ಪಿಬಿಎಲ್‌) ಟೂರ್ನಿಯಲ್ಲಿ ಪಾಲ್ಗೊಳ್ಳುವ ಬೆಂಗಳೂರು ರ‍್ಯಾಪ್ಟರ್ಸ್ ತಂಡ ಪ್ರತಿಭೆಗಳ ಹುಡುಕಾಟ ನಡೆಸಲಿದೆ. ಪ್ರತಿಭಾ ಶೋಧ ಸರ್ಜಾಪುರದ ಹಾಲನಾಯಕನಹಳ್ಳಿಯಲ್ಲಿರುವ ಲೆವೆಲ್ ಅಪ್ ಸ್ಪೋರ್ಟ್ಸ್ ಪ್ರೈವೆಟ್ ಲಿಮಿಟೆಡ್‌ ಆವರಣದಲ್ಲಿ ಇದೇ 19ರಿಂದ ಡಿಸೆಂಬರ್ ಆರರ ವರೆಗೆ ನಡೆಯಲಿದೆ.

ನವೆಂಬರ್‌ 19ರಿಂದ 22ರ ವರೆಗೆ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌, ಬಾಲಕಿಯರ ಸಿಂಗಲ್ಸ್ ಮತ್ತು ಎರಡೂ ವಿಭಾಗಗಳ ಡಬಲ್ಸ್‌ ಪಂದ್ಯಗಳು ನಡೆಯಲಿವೆ. ಪುರುಷರ ಸಿಂಗಲ್ಸ್‌–ಡಬಲ್ಸ್‌, ಮಹಿಳೆಯರ ಸಿಂಗಲ್ಸ್‌–ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದ ಸ್ಪರ್ಧೆಗಳೂ ಇದೇ ಅವಧಿಯಲ್ಲಿ ನಡೆಯಲಿವೆ. ಇದಕ್ಕೆ ಹೆಸರು ನೊಂದಾಯಿಸಿಕೊಳ್ಳಲು ಇದೇ 16 ಕೊನೆಯ ದಿನವಾಗಿದೆ.

ನವೆಂಬರ್‌ 26ರಿಂದ 29ರ ವರೆಗೆ 13 ವರ್ಷದೊಳಗಿನ ಬಾಲಕ–ಬಾಲಕಿಯರ ಸಿಂಗಲ್ಸ್‌, ಡಬಲ್ಸ್‌, 19 ವರ್ಷದೊಳಗಿನ ಬಾಲಕ–ಬಾಲಕಿಯರ ಸಿಂಗಲ್ಸ್, ಡಬಲ್ಸ್‌, ಮಿಶ್ರ ಡಬಲ್ಸ್‌ ಸ್ಪರ್ಧೆಗಳು ನಡೆಯಲಿದ್ದು ಹೆಸರು ನೊಂದಾಯಿಸಿಕೊಳ್ಳಲು 23 ಕೊನೆಯ ದಿನ.

ADVERTISEMENT

ಡಿಸೆಂಬರ್ ಮೂರರಿಂದ ಆರರ ವರೆಗೆ 17 ವರ್ಷದೊಳಗಿನ ಬಾಲಕ–ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ನವೆಂಬರ್ 30, ಹೆಸರು ನೊಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ. ಸಿಂಗಲ್ಸ್ ವಿಭಾಗದಲ್ಲಿ ಪಾಲ್ಗೊಳ್ಳುವವರಿಗೆ ₹ 600 ಮತ್ತು ಡಬಲ್ಸ್ ವಿಭಾಗಕ್ಕೆ ₹ 800 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು. ವಯಸ್ಸು ದೃಢೀಕರಿಸುವ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಕೋಚ್ ಮತ್ತು ತಂದೆ–ತಾಯಿಗೆ ಮಾತ್ರ ಕ್ರೀಡಾಂಗಣದ ಒಳಗೆ ಪ್ರವೇಶ ನೀಡಲಾಗುವುದು. ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡು ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ 9606999133 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.