ADVERTISEMENT

ಕುಸ್ತಿ: ರವಿಕುಮಾರ್‌ಗೆ ಚಿನ್ನದ ಪದಕ

Ravi Kumar Dahiya wins wrestling gold at Commonwealth Games 2022

ಪಿಟಿಐ
Published 6 ಆಗಸ್ಟ್ 2022, 17:08 IST
Last Updated 6 ಆಗಸ್ಟ್ 2022, 17:08 IST
ರವಿ ಕುಮಾರ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಸೂರಜ್‌ ಸಿಂಗ್‌ ಜತೆ ಪೈಪೋಟಿ ನಡೆಸಿದರು –ಪಿಟಿಐ ಚಿತ್ರ
ರವಿ ಕುಮಾರ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಸೂರಜ್‌ ಸಿಂಗ್‌ ಜತೆ ಪೈಪೋಟಿ ನಡೆಸಿದರು –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಕುಸ್ತಿ ಅಖಾಡದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ರವಿ ಕುಮಾರ್‌ ಅವರು ಚಿನ್ನ ಗೆದ್ದರೆ, ಪೂಜಾ ಗೆಹಲೋತ್‌ ಕಂಚು ಪಡೆದರು.

ಶನಿವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ರವಿ ಅವರು 10–0 ರಲ್ಲಿ ನೈಜೀರಿಯದ ಎಬಿಕ್ವೆನಿಮೊ ವೆಲ್ಸನ್‌ ವಿರುದ್ಧ ಜಯಿಸಿದರು. ಅದ್ಭುತ ಚಾಕಚಕ್ಯತೆ ತೋರಿದ ರವಿ ಕೇವಲ 2.16 ನಿಮಿಷಗಳಲ್ಲಿ ಗೆದ್ದರು.

ರವಿಕುಮಾರ್ ಸೆಮಿಫೈನಲ್‌ನಲ್ಲಿ 14–4 ರಲ್ಲಿ ಪಾಕಿಸ್ತಾನದ ಅಲಿ ಅಸಾದ್ ವಿರುದ್ಧ ಗೆದ್ದಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಸೂರಜ್‌ ಸಿಂಗ್‌ ಅವರನ್ನು
ಮಣಿಸಿದ್ದರು.

ADVERTISEMENT

ಪೂಜಾ ಅವರು ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಮೂರನೇ ಸ್ಥಾನವನ್ನು ನಿರ್ಣಯಿಸಲು ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 12–2 ರಲ್ಲಿ ಕ್ರಿಸ್ಟೆಲ್‌ ಲೆಮೊಫಾಕ್‌ ವಿರುದ್ಧ ಜಯಿಸಿದರು. ಪೂಜಾ ಸೆಮಿಫೈನಲ್‌ನಲ್ಲಿ 6–9 ರಲ್ಲಿ ಕೆನಡಾದ ಮ್ಯಾಡಿಸನ್‌ ಪಾರ್ಕ್ಸ್‌ ಎದುರು ಪರಾಭಗೊಂಡಿದ್ದರು.

ಫೈನಲ್‌ಗೆ ವಿನೇಶ: ವಿನೇಶ ಪೋಗಟ್‌ ಅವರು ಮಹಿಳೆಯರ 53 ಕೆ.ಜಿ. ವಿಭಾಗದ ಫೈನಲ್‌ ಪ್ರವೇಶಿಸಿದ್ದು, ಚಿನ್ನದ ಪದಕಕ್ಕಾಗಿ ಶ್ರೀಲಂಕಾದ ಚಮೋದ್ಯ ಕೇಶನಿ ಮದುರವಲಗೆ ಅವರನ್ನು ಎದುರಿಸುವರು.

ವಿನೇಶ ತಮ್ಮ ಮೊದಲ ಎರಡು ಬೌಟ್‌ಗಳಲ್ಲಿ ಕ್ರಮವಾಗಿ ನೈಜೀರಿಯದ ಮರ್ಸಿ ಅಡೆಕುರೆಯೊ ಹಾಗೂ ಕೆನಡಾದ ಸಮಂತಾ ಸ್ಟಿವರ್ಟ್‌ ಅವರನ್ನು ಮಣಿಸಿದರು.

ಪೂಜಾ ಸಿಹಾಗ್‌ ಅವರು ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಮತ್ತು ದೀಪಕ್‌ ನೆಹ್ರಾ ಅವರು ಪುರುಷರ 97 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದು, ಕಂಚಿನ ಪದಕಕ್ಕಾಗಿ ಪೈಪೋಟಿ
ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.