ADVERTISEMENT

ಎಂಎಂಎ: ರಿತು ಪೋಗಟ್‌ಗೆ ಪೊವ್‌ ಎದುರಾಳಿ

ಪಿಟಿಐ
Published 13 ಅಕ್ಟೋಬರ್ 2020, 13:48 IST
Last Updated 13 ಅಕ್ಟೋಬರ್ 2020, 13:48 IST
ರಿತು ಪೋಗಟ್‌–ರಾಯಿಟರ್ಸ್ ಚಿತ್ರ
ರಿತು ಪೋಗಟ್‌–ರಾಯಿಟರ್ಸ್ ಚಿತ್ರ   

ನವದೆಹಲಿ: ಭಾರತದ ಕುಸ್ತಿ ತಾರೆ ರಿತು ಪೋಗಟ್‌ ಅವರು ‘ಒನ್‌ ಇನ್‌ಸೈಡ್‌ ದ ಮ್ಯಾಟ್ರಿಕ್ಸ್‘ ಮಿಕ್ಸೆಡ್‌ ಮಾರ್ಷಲ್‌ ಆರ್ಟ್ಸ್ (ಎಂಎಂಎ) ಚಾಂಪಿಯನ್‌ಷಿಪ್‌ನಲ್ಲಿ ಕಾಂಬೋಡಿಯಾದ ನೋವಾ ಸ್ರೇ ಪೊವ್‌ ಎದುರು ಸೆಣಸಲಿದ್ದಾರೆ.

ಅಕ್ಟೋಬರ್‌ 30ರಿಂದ ಸಿಂಗಾಪುರದ ಒಳಾಂಗಣ ಕ್ರೀಡಾಂಗಣದಿಂದ ಬೌಟ್‌ಗಳು ನೇರಪ್ರಸಾರವಾಗಲಿವೆ ಎಂದು ಟೂರ್ನಿಯ ಸಂಘಟನಾ ಸಂಸ್ಥೆ ಒನ್‌ ಚಾಂಪಿಯನ್‌ಷಿಪ್‌ ಮಂಗಳವಾರ ಪ್ರಕಟಿಸಿದೆ.

‘ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಾದಾಗಿನಿಂದ ನಾನು ಕುಟುಂಬದಿಂದ ದೂರವೇ ಇದ್ದೇನೆ. ಒನ್‌ ಇನ್‌ಸೈಡ್‌ ದ ಮ್ಯಾಟ್ರಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲು ಕಾತರನಾಗಿದ್ದೇನೆ. ಭಾರತ ಎಂಎಂಎ ಪ್ರತಿಭೆಗಳ ಶಕ್ತಿ ಕೇಂದ್ರ ಎಂದು ವಿಶ್ವಕ್ಕೆ ತೋರಿಸುತ್ತೇನೆ‘ ಎಂದು ರಿತು ಹೇಳಿದ್ದಾರೆ.

ADVERTISEMENT

ಈ ಟೂರ್ನಿಯಲ್ಲಿ ನಾಲ್ಕು ವಿಶ್ವ ಚಾಂಪಿಯನ್‌ಷಿಪ್‌ ಬೌಟ್‌ಗಳಿವೆ. ಮ್ಯಾನ್ಮಾರ್‌ನ ಅಂಗ್‌ ಲಾ ಎನ್ ಸಾಂಗ್‌ ಅವರು ಮಿಡ್ಲವೇಟ್‌ ವಿಭಾಗದಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸೆಣಸಲಿದ್ದು, ನೆದರ್ಲೆಂಡ್ಸ್‌ನ ರೀನರ್‌ ಡಿ ರಿಡ್ಡರ್‌ ಅವರನ್ನು ಎದುರಿಸಲಿದ್ದಾರೆ. ಲೈಟ್‌ವೇಟ್‌ ವಿಭಾಗದಲ್ಲಿ ಸಿಂಗಾಪುರದ ಕ್ರಿಸ್ಟಿಯನ್‌ ಲೀ ಅವರು ಮೊಲ್ಡೊವಾದ ಇಯುರಿ ಲ್ಯಾಪಿಕಸ್‌ ಎದುರು, ಫೀದರ್‌ವೇಟ್‌ ವಿಭಾಗದಲ್ಲಿ ವಿಯೆಟ್ನಾಂನ ಮಾರ್ಟಿನ್‌ ನುಗುಯೆನ್‌ ಅವರು ಅಮೆರಿಕದ ಥಾನ್‌ ಲೀ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.