ADVERTISEMENT

ಬೈಥ್ಲಾನ್‌: ಉದ್ದೀಪನ ಮದ್ದು ಯುಜೆನಿ ಅಮಾನತು

ಉದ್ದೀಪನ ಮದ್ದು ಸೇವನೆ ಸಾಬೀತು

ಏಜೆನ್ಸೀಸ್
Published 15 ಫೆಬ್ರುವರಿ 2020, 18:07 IST
Last Updated 15 ಫೆಬ್ರುವರಿ 2020, 18:07 IST

ಮಾಸ್ಕೊ, ರಷ್ಯಾ: ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ರಷ್ಯಾದ ಬೈಅಥ್ಲೀಟ್‌ ಯುಜೆನಿ ಯುಸ್ತಿಗೊವ್‌ ಅವರನ್ನು ಅಂತರರಾಷ್ಟ್ರೀಯ ಬೈಥ್ಲಾನ್‌ ಒಕ್ಕೂಟ (ಐಬಿಯು) ಅಮಾನತುಗೊಳಿಸಿದೆ. ಇದರಿಂದಾಗಿ ಅವರು 2014ರಲ್ಲಿ ಸೋಚಿಯಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಗಳಿಸಿದ ಚಿನ್ನದ ಪದಕವನ್ನು ಕಳೆದುಕೊಳ್ಳಲಿದ್ದಾರೆ. ಈ ಒಲಿಂಪಿಕ್ಸ್‌ನ ರಿಲೇಯಲ್ಲಿ ಅವರು ಚಿನ್ನ ಗೆದ್ದುಕೊಂಡಿದ್ದರು.

34 ವರ್ಷದ ಯುಜೆನಿ, ಸೋಚಿ ಒಲಿಂಪಿಕ್ಸ್‌ ಬಳಿಕ ನಿವೃತ್ತಿ ಘೋಷಿಸಿದ್ದರು.

2014ರಲ್ಲಿ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ ನಿಷೇಧಿತ ಮದ್ದು ಪತ್ತೆಯಾಗಿದೆ. ಹಾಗಾಗಿ 2013–14ರ ಸಾಲಿನ ಅವರು ಸ್ಪರ್ಧೆಯ ಎಲ್ಲ ಫಲಿತಾಂಶಗಳನ್ನು ರದ್ದುಪಡಿಸಲಾಗಿದೆ.ಮಹಿಳಾ ಅಥ್ಲೀಟ್‌ ಸ್ವೇಟ್ಲಾನಾ ಸ್ಲೆಪ್ಟ್‌ಸೊವಾ ಅವರೂ ಇಂತಹದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.