ADVERTISEMENT

ಮೊದಲ ದಿನ ಗಮನ ಸೆಳೆದ ಸಹನಾ, ಸೌಮ್ಯ

ರಾಜ್ಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌: ವಿಜಯಪುರ, ಬಾಗಲಕೋಟೆ ಸೈಕ್ಲಿಸ್ಟ್‌ಗಳ ಮಿಂಚು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 19:20 IST
Last Updated 20 ಅಕ್ಟೋಬರ್ 2021, 19:20 IST
ಬಾಲಕಿಯರ 15 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್‌ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಚೈತ್ರಾ ಬೋರಗಿ, ಭಾವನಾ ಪಿ ಹಾಗೂ ಅಂಕಿತಾ ರಾಠೋಡ
ಬಾಲಕಿಯರ 15 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್‌ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಚೈತ್ರಾ ಬೋರಗಿ, ಭಾವನಾ ಪಿ ಹಾಗೂ ಅಂಕಿತಾ ರಾಠೋಡ   

ವಿಜಯಪುರ: ಸ್ಥಳೀಯ ಪ್ರತಿಭೆಗಳಾದ ಸಹನಾ ಕುಡಿನೂರ ಹಾಗೂ ಸೌಮ್ಯ ಅಂತಾಪುರ ನಗರದಲ್ಲಿ ಬುಧವಾರ ಆರಂಭವಾದ ರಾಜ್ಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗಮನ ಸೆಳೆದರು.

ಮಹಿಳೆಯರ 30 ಕಿ.ಮೀ ಮಾಸ್ ಸ್ಟಾರ್ಟ್ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಸಹನಾ ಕುಡಿಗನೂರ 56 ನಿಮಿಷ 48.00 ಸೆಕೆಂಡ್‌ನಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಬಾಗಲಕೋಟೆ ಜಿಲ್ಲೆಯ ದಾನಮ್ಮ ಚಿಚಖಂಡಿ (56:51.00ಸೆ.) ಮತ್ತು ವಿಜಯಪುರ ಕ್ರೀಡಾನಿಲಯದ ದಾನವ್ವ ಗುರವ (56:55.00ಸೆ.) ನಂತರದ ಎರಡು ಸ್ಥಾನಗಳನ್ನು ಪಡೆದರು.

ಮಹಿಳೆಯರ 15 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ವಿಜಯಪುರ ಕ್ರೀಡಾ ನಿಲಯದ ಸೌಮ್ಯ ಅಂತಾಪುರ (23:04.49ಸೆ.) ಪ್ರಥಮ ಸ್ಥಾನ ಪಡೆದರು. ಬಾಗಲಕೋಟೆ ಜಿಲ್ಲೆಯ ಸಾವಿತ್ರಿ ಹೆಬ್ಬಾಳಟ್ಟಿ (23:17.02ಸೆ) ದ್ವಿತೀಯ ಮತ್ತು ಕಾವೇರಿ ಮುರನಾಳ (23:18.07ಸೆ.) ಮೂರನೇ ಸ್ಥಾನ ಗಳಿಸಿದರು.

ADVERTISEMENT

ಮೊದಲ ದಿನದ ಫಲಿತಾಂಶ: ಬಾಲಕರ ಹಾಗೂ ಪುರುಷರ ವಿಭಾಗ: 30 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ನವೀನ ಎಸ್‌. (ಬೆಂಗಳೂರು ಜಿಲ್ಲೆ; ಕಾಲ: 40:25.50 ಸೆ.)–1, ಸೋಮೇಶ (ಮೈಸೂರು ಜಿಲ್ಲೆ; 40:30.70ಸೆ.)–2, ಕಿರಣಕುಮಾರ ರಾಜು (ಬೆಂಗಳೂರು ಜಿಲ್ಲೆ; 40:48.97ಸೆ.)–3.

14 ವರ್ಷದೊಳಗಿನ 10 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಬೀರಪ್ಪ ನವಲಿ (17:24.69ಸೆ.)–1, ಅರವಿಂದ ರಾಠೋಡ (18:03.75ಸೆ.)–2, ತರುಣ ನಾಯಕ (ಮೂವರೂ ವಿಜಯಪುರ ಕ್ರೀಡಾನಿಲಯ; 18:15.14ಸೆ.)–3.

16 ವರ್ಷದೊಳಗಿನ 15 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಸುಜಲ್ ಜಾಧವ (ವಿಜಯಪುರ ಕ್ರೀಡಾ ನಿಲಯ; 19:49.95ಸೆ.)–1, ರಾಘವೇಂದ್ರ ವಂದಾಲ (ವಿಜಯ ಪುರ; 19:51.83ಸೆ)–2, ರಾಹುಲ್ ರಾಠೋಡ (ವಿಜಯಪುರ ಕ್ರೀಡಾ ನಿಲಯ; 20.08.55ಸೆ.)–3.

18 ವರ್ಷದೊಳಗಿನ ಬಾಲಕರ 15 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಉದಯ ಗುಳೇದ (ವಿಜಯಪುರ ಕ್ರೀಡಾನಿಲಯ; 19:45.49ಸೆ.)–1, ಪ್ರತಾಪ ಪಡಚಿ (19:59.18ಸೆ.)–2, ಮಲ್ಲಿಕಾರ್ಜುನ ಯಾದವಾಡ (ಬಾಗಲ ಕೋಟೆ ಜಿಲ್ಲೆ; 20:02.84ಸೆ.)–3.

23 ವರ್ಷದೊಳಗಿನ 30 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಜಿ.ಟಿ.ಗಗನರಡ್ಡಿ (ಬೆಂಗಳೂರು ಜಿಲ್ಲೆ; 39:34.50ಸೆ.)–1, ಅನಿಲ ಕಾಳಪ್ಪ ಗೋಳ (ವಿಜಯಪುರ ಕ್ರೀಡಾನಿಲಯ; 39:52.14ಸೆ.)–2, ಶ್ರೀಶೈಲ ವೀರಾ ಪುರ (40:03.24ಸೆ.)–3.

ಬಾಲಕಿಯರ ಹಾಗೂ ಮಹಿಳೆಯರ ವಿಭಾಗ: 14 ವರ್ಷದೊಳಗಿನ 10 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಆಯೀಶಾ ಮೋಮಿನ (ಬಾಗಲಕೋಟೆ ಜಿಲ್ಲೆ; 19:32.41ಸೆ.)–1, ಛಾಯಾ ನಾಗಶೆಟ್ಟಿ (ವಿಜಯಪುರ ಕ್ರೀಡಾ ನಿಲಯ; 20:08.04ಸೆ.)–2, ವಿದ್ಯಾ ಯಾದವಾಡ (ಬಾಗಲಕೋಟೆ ಜಿಲ್ಲೆ; 20:30.27ಸೆ.)–3.

16 ವರ್ಷದೊಳಗಿನ 10 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಪಾಯಲ್ ಚವ್ಹಾಣ (ವಿಜಯಪುರ ಕ್ರೀಡಾನಿಲಯ; 17:47.05)–1, ಅನುಪಮಾ ಗುಳೇದ (ಬಾಗಲಕೋಟೆ ಜಿಲ್ಲೆ; 17:56.16ಸೆ.)–2, ಅಕ್ಷತಾ ಬೂತನಾಳ (ವಿಜಯಪುರ ಜಿಲ್ಲೆ;18:26.77ಸೆ.)–3.

18 ವರ್ಷದೊಳಗಿನವರ 15 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್: ಚೈತ್ರಾ ಬೋರ್ಜಿ (ಬಾಗಲಕೋಟೆ ಜಿಲ್ಲೆ; 22.39.12ಸೆ.)–1, ಭಾವನಾ ಪಾಟೀಲ (ಬಾಗಲಕೋಟೆ ಜಿಲ್ಲೆ; 24:04.62ಸೆ.)–2, ಅಂಕಿತಾ ರಾಠೋಡ (ವಿಜಯಪುರ ಜಿಲ್ಲೆ; 24.24.07ಸೆ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.