ADVERTISEMENT

‘ಪ್ರತ್ಯೇಕವಾಸ’ಕ್ಕೆ ಸಾಯ್‌ ಕೇಂದ್ರಗಳ ಬಳಕೆ: ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧಾರ

ಪಿಟಿಐ
Published 22 ಮಾರ್ಚ್ 2020, 13:46 IST
Last Updated 22 ಮಾರ್ಚ್ 2020, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಭೀತಿಯ ಕಾರಣ ಮುಚ್ಚಲ್ಪಟಿರುವ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರಗಳನ್ನು(ಸಾಯ್‌) ಸೋಂಕು ಪೀಡಿತರಿಗೆ ‘ಪ್ರತ್ಯೇಕವಾಸ’ (ಕ್ವಾರೆಂಟೈನ್‌) ಸೌಲಭ್ಯಗಳಿಗೆ ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ತಿಳಿಸಿದೆ.

ಆರೋಗ್ಯ ಸಚಿವಾಲಯದ ಮನವಿಯಂತೆ ಸಾಯ್‌ನ ಪ್ರಾದೇಶಿಕ ಕೇಂದ್ರಗಳು, ಕ್ರೀಡಾಂಗಣಗಳು ಹಾಗೂ ವಸತಿನಿಲಯಗಳನ್ನು ‘ಪ್ರತ್ಯೇಕವಾಸ’ದ ಉಪಯೋಗಕ್ಕೆ ನೀಡಲಾಗುತ್ತಿದೆ.

‘ಇದೊಂದು ಬಿಕ್ಕಟ್ಟಿನ ಸ್ಥಿತಿ. ಸರ್ಕಾರದ ಅಗತ್ಯಕ್ಕೆ ತಕ್ಕಂತೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ಸಾಯ್‌ ಕೇಂದ್ರಗಳು ಸಾರ್ವಜನಿಕ ಆಸ್ತಿಯಾಗಿದ್ದು, ‘ಪ್ರತ್ಯೇಕವಾಸ’ಕ್ಕೆ ನೀಡಲು ನಿರ್ಧರಿಸಲಾಗಿದೆ’ ಎಂದು ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್‌ ಜುಲಾನಿಯಾ ಹೇಳಿದ್ದಾರೆ.

ADVERTISEMENT

ಆರೋಗ್ಯ ಸಚಿವಾಲಯ ಯಾವಾಗ ಇವುಗಳನ್ನು ಉಪಯೋಗಿಸಿಕೊಳ್ಳಲಿದೆ ಎಂಬುದನ್ನು ಜುಲಾನಿಯಾ ನಿಖರವಾಗಿ ಹೇಳಿಲ್ಲ.

ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಸಾಯ್‌ನ 10 ಪ್ರಾದೇಶಿಕ ಕೇಂದ್ರಗಳು ಹಾಗೂ ಐದು ಕ್ರೀಡಾಂಗಣಗಳಿವೆ. ಇವುಗಳಲ್ಲಿ ಕನಿಷ್ಠ 2000 ಸೋಂಕಿತರಿಗೆ ‘ಪ್ರತ್ಯೇಕವಾಸ’ದ ಸೌಲಭ್ಯ ನೀಡಬಹುದು ಎಂಬುದು ಸರ್ಕಾರದ ಅಂದಾಜು.

ಕೊರೊನಾ ಭೀತಿಯ ಕಾರಣ ಸಾಯ್‌ನ ಎಲ್ಲ ತರಬೇತಿ ಕೇಂದ್ರಗಳಲ್ಲಿ ತರಬೇತಿಯನ್ನು ನಿಲ್ಲಿಸಲಾಗಿದೆ. ಅಥ್ಲೀಟುಗಳನ್ನು ಮನೆಗೆ ಕಳುಹಿಸಲಾಗಿದೆ. ಒಲಿಂಪಿಕ್ಸ್‌ಗಾಗಿ ತರಬೇತಿ ನಡೆಸುತ್ತಿರುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಂದುವರಿಯಲು ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.