ADVERTISEMENT

ಬಾಗಿಲು ಮುಚ್ಚಲಿರುವ ಸಾಯ್‌ ತರಬೇತಿ ಕೇಂದ್ರಗಳು

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ: ಎಲೀಟ್‌ ಅಥ್ಲೀಟ್‌ಗಳ ಶಿಬಿರ ಅಬಾಧಿತ

ಪಿಟಿಐ
Published 10 ಜನವರಿ 2022, 14:04 IST
Last Updated 10 ಜನವರಿ 2022, 14:04 IST

ನವದೆಹಲಿ: ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ 67 ತರಬೇತಿ ಕೇಂದ್ರಗಳನ್ನು ಮುಚ್ಚಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ನಿರ್ಧರಿಸಿದೆ. ಆದರೆ ಎಲೀಟ್ ಅಥ್ಲೀಟ್‌ಗಳ ರಾಷ್ಟ್ರೀಯ ಶಿಬಿರಗಳು ಬಯೋಬಬಲ್‌ ವ್ಯವಸ್ಥೆಯಲ್ಲಿ ಮುಂದುವರಿಯಲಿವೆ.

ಪಟಿಯಾಲ ಮತ್ತು ಬೆಂಗಳೂರಿನಲ್ಲಿರುವಂತಹ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳ ಮೇಲೆ (ಎನ್‌ಸಿಒಇ)ಈ ನಿರ್ಧಾರವು ಪರಿಣಾಮ ಬೀರುವುದಿಲ್ಲ, ಅಲ್ಲಿರುವ ಎಲೀಟ್‌ ಕ್ರೀಡಾಪಟುಗಳಿಗೆ ವಿವಿಧ ವಿಭಾಗಗಳಲ್ಲಿ ಶಿಬಿರಗಳು ಪ್ರಗತಿಯಲ್ಲಿವೆ.

‘ಕೋವಿಡ್‌ಪ್ರಕರಣಗಳು ಹೆಚ್ಚುತ್ತಿರುವ ದೃಷ್ಟಿಯಿಂದ, ದೇಶದಾದ್ಯಂತ 67 ತರಬೇತಿ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.ಕ್ರೀಡಾಪಟುಗಳ ಸುರಕ್ಷತೆಗಾಗಿ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ವಿವಿಧ ರಾಜ್ಯಗಳು ನೀಡಿದ ನಿರ್ದೇಶನಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ‘ ಎಂದು ಸಾಯ್‌ ತಿಳಿಸಿದೆ.

ADVERTISEMENT

ಹಲವು ತರಬೇತಿ ಕೇಂದ್ರಗಳಲ್ಲಿರುವ ಅಥ್ಲೀಟ್‌ಗಳಲ್ಲಿ ಕೋವಿಡ್‌ ಪ್ರಕರಣಗಳು ದೃಢಪಟ್ಟ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಸಮಯದಲ್ಲಿ ತರಬೇತಿ ಕೇಂದ್ರಗಳನ್ನು ಪುನರಾರಂಭಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.