ADVERTISEMENT

Tokyo Olympics: ಸೇಲಿಂಗ್‌ ಪಟುಗಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 19:50 IST
Last Updated 26 ಜುಲೈ 2021, 19:50 IST
ಪುರುಷರ ಲೇಸರ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ವಿಷ್ಣು ಸರವಣನ್‌– ರಾಯಿಟರ್ಸ್ ಚಿತ್ರ
ಪುರುಷರ ಲೇಸರ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ವಿಷ್ಣು ಸರವಣನ್‌– ರಾಯಿಟರ್ಸ್ ಚಿತ್ರ   

ಟೋಕಿಯೊ: ಭಾರತದ ಸೇಲಿಂಗ್ ಪಟುಗಳಾದ ವಿಷ್ಣು ಸರವಣನ್‌ ಮತ್ತು ನೇತ್ರಾ ಕುಮನನ್ ಅವರು ಸ್ಪರ್ಧೆಯ ಎರಡನೇ ದಿನವೂ ನಿರಾಸೆ ಮೂಡಿಸಿದರು.

ಮಹಿಳೆಯರ ಲೇಸರ್‌ರೇಡಿಯಲ್‌ ವಿಭಾಗದಲ್ಲಿ ಮೂರನೇ ರೇಸ್‌ನಲ್ಲಿ ನೇತ್ರಾ 15ನೇ ಸ್ಥಾನ ಗಳಿಸಿದರೆ, ನಾಲ್ಕನೇ ರೇಸ್‌ಅನ್ನು 40ನೇ ಸ್ಥಾನ ದೊಂದಿಗೆ ಕೊನೆಗೊಳಿಸಿದರು.

ಪುರುಷರ ಲೇಸರ್‌ ವಿಭಾಗದಲ್ಲಿ ಕಣಕ್ಕಿಳಿದಿರುವ ವಿಷ್ಣು ಎರಡನೇ ರೇಸ್‌ನಲ್ಲಿ 20ನೇ ಸ್ಥಾನ ಗಳಿಸಿದರೆ, ಮೂರನೇ ರೇಸ್‌ನಲ್ಲಿ 24ನೇ ಸ್ಥಾನ ಗಳಿಸಿದರು.

ADVERTISEMENT

ಮಂಗಳವಾರ ಐದು ಹಾಗೂ ಆರನೇ ರೇಸ್‌ನಲ್ಲಿ ನೇತ್ರಾ ಅವರು ಅದೃಷ್ಟ ಪರೀಕ್ಷಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.