ADVERTISEMENT

ಎಸ್‌ಆರ್‌ಎಫ್‌ಐ ಅಧ್ಯಕ್ಷರಾಗಿ ಸಾರಂಗಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:14 IST
Last Updated 16 ಜೂನ್ 2019, 20:14 IST
ದೇಬೇಂದ್ರನಾಥ ಸಾರಂಗಿ
ದೇಬೇಂದ್ರನಾಥ ಸಾರಂಗಿ   

ಚೆನ್ನೈ: ಭಾರತ ಸ್ಕ್ವಾಷ್‌ ರಾಕೆಟ್ಸ್‌ ಫೆಡರೇಷನ್‌ (ಎಸ್‌ಆರ್‌ಎಫ್‌ಐ) ಅಧ್ಯಕ್ಷರಾಗಿ ಶನಿವಾರ ದೇಬೇಂದ್ರನಾಥ ಸಾರಂಗಿ ಮರುಆಯ್ಕೆಯಾದರು. ರಾಷ್ಟ್ರೀಯ ತರಬೇತುದಾರ ಸೈರಸ್‌ ಪೊಂಚಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಸಾರಂಗಿ ಹಾಗೂ ಪೊಂಚಾ ಅವರನ್ನು ನಾಲ್ಕು ವರ್ಷಗಳ ಅವಧಿಗೆ (2019–23) ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಫೆಡರೇಷನ್‌ ಪತ್ರಿಕಾ ಪ್ರಕಟಣೆ ನೀಡಿದೆ.

ಕೋಚಿಂಗ್‌ ನಿರ್ದೇಶಕ ಸ್ಥಾನವನ್ನು ಸೃಷ್ಟಿಸಲು ಎಸ್‌ಆರ್‌ಎಫ್‌ಐ ನಿರ್ಧ ರಿಸಿದ್ದು, ಜೋಧಪುರ ಮೂಲದ ಧೀರಜ್‌ ಸಿಂಗ್‌ ಅವರು ಈ ಹುದ್ದೆಗೆ ನೇಮಕವಾಗಲಿರುವರು. ಕೋಚ್‌ಗಳ ತಂಡ ಇವರ ಉಸ್ತುವಾರಿಯಲ್ಲಿ ಕೆಲಸ ನಿರ್ವಹಿಸಲಿದೆ.

ADVERTISEMENT

ಎನ್‌.ರಾಮಚಂದ್ರನ್‌ ಪೋಷಕ ರಾಗಿ ಕಾರ್ಯನಿರ್ವಹಿಸಲಿದ್ದು, ರೆಫರಿಗಳ ನಿರ್ದೇಶಕರಾಗಿ ಶ್ರೀಕಾಂತ್‌ ಶೇಷಾದ್ರಿ, ಒಲಿಂಪಿಯನ್‌ ಮುನೀರ್‌ ಸೇಠ್‌ ಅವರು ಶಿಸ್ತು ಸಮಿತಿ ಅಧ್ಯಕ್ಷರಾಗಿ ಹಾಗೂ ಭುವನೇಶ್ವರಿ ಕುಮಾರಿ ಅಥ್ಲೀಟ್‌ಗಳ ಆಯೋಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.