ADVERTISEMENT

Asia Badminton Championship| ಸಾತ್ವಿಕ್‌–ಚಿರಾಗ್ ಐತಿಹಾಸಿಕ ಸಾಧನೆ

ಪಿಟಿಐ
Published 30 ಏಪ್ರಿಲ್ 2023, 20:59 IST
Last Updated 30 ಏಪ್ರಿಲ್ 2023, 20:59 IST
   

ದುಬೈ : ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ 58 ವರ್ಷಗಳ ಬಳಿಕ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಇಲ್ಲಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿ 16–21, 21–17, 21–19ರಿಂದ ಮಲೇಷ್ಯಾದ ಆಂಗ್‌ ಯೆವ್‌ ಸಿನ್‌– ತಿಯೊ ಎ ಯಿ ಅವರನ್ನು ಮಣಿಸಿತು.

ಏಷ್ಯಾ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನವಿದು. 1971ರಲ್ಲಿ ಭಾರತದ ದೀಪು ಘೋಷ್‌– ರಮಣ್ ಘೋಷ್‌ ಕಂಚು ಜಯಿಸಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ADVERTISEMENT

1965ರಲ್ಲಿ ದಿನೇಶ್ ಖನ್ನಾ ಅವರು ಥಾಯ್ಲೆಂಡ್‌ನ ಸಂಗೊಬ್‌ ರತ್ತನುಸೊರ್ನ್‌ ಅವರನ್ನು ಸೋಲಿಸಿ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು. ಲಖನೌನಲ್ಲಿ ಈ ಟೂರ್ನಿ ನಡೆದಿತ್ತು. 

ಈ ಋತುವಿನಲ್ಲಿ ಭಾರತದ ಆಟಗಾರರು ಗೆದ್ದ ಎರಡನೇ ಪ್ರಶಸ್ತಿ ಇದು. ಮಾರ್ಚ್‌ನಲ್ಲಿ ನಡೆದ ಸ್ವಿಸ್‌ ಓಪನ್‌ 300 ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು.

ಸಾತ್ವಿಕ್–ಚಿರಾಗ್‌ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಐದು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.