ADVERTISEMENT

ರಾಜ್ಯ ಮುಕ್ತ ಚೆಸ್‌: ಶರಣ್ ರಾವ್‌ಗೆ ಮಣಿದ ಸಂಜಯ್‌

ರಾಜ್ಯ ಮುಕ್ತ ಚೆಸ್ ಚಾಂಪಿಯನ್‌ಷಿಪ್‌: ಅಗ್ರ ಸ್ಥಾನ ಹಂಚಿಕೊಂಡ ಓಜಸ್ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 15:54 IST
Last Updated 3 ಏಪ್ರಿಲ್ 2021, 15:54 IST
ಶರಣ್ ರಾವ್
ಶರಣ್ ರಾವ್   

ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ, ಮಾಜಿ ರಾಜ್ಯ ಚಾಂಪಿಯನ್‌ ಸಂಜಯ್ ಎನ್ ಎದುರು ಜಯ ಸಾಧಿಸಿದ ಮಂಗಳೂರಿನ ಶರಣ್ ರಾವ್ ಅವರು ನಗರದ ವೈಟ್‌ಫೀಲ್ಡ್‌ನಲ್ಲಿ ನಡೆಯುತ್ತಿರುವ ಬೆಂಗಳೂರು ಗ್ರಾಮಾಂತರ ಚೆಸ್ ಸಂಸ್ಥೆ ಆಶ್ರಯದ ಫಿಡೆ ರೇಟೆಡ್‌ ರಾಜ್ಯ ಚಾಂಪಿಯನ್‌ಷಿಪ್‌ನ ಅಗ್ರ ಸ್ಥಾನಕ್ಕೇರಿದರು.

ಸಂಜಯ್ 2330 ಇಲೊ ರೇಟಿಂಗ್ ಹೊಂದಿದ್ದು ಶರಣ್‌ 1992 ರೇಟಿಂಗ್‌ ಹೊಂದಿದ್ದಾರೆ. ಶನಿವಾರ ನಡೆದ ಏಳನೇ ಸುತ್ತಿನಲ್ಲಿ ಜಯ ಗಳಿಸುವುದರೊಂದಿಗೆ ಶರಣ್ ಅವರ ಪಾಯಿಂಟ್ ಗಳಿಕೆ 6.5ಕ್ಕೆ ಏರಿತು. ಇಶಾ ಶರ್ಮಾ ಎದುರು ಜಯ ಗಳಿಸಿದ ಓಜಸ್ ಕುಲಕರ್ಣಿ ಕೂಡ ಇಷ್ಟೇ ಪಾಯಿಂಟ್ ಹೊಂದಿದ್ದು ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.

ಸಂಜಯ್, ಪ್ರಚುರ, ಬಾಲಕಿಶನ್‌, ಇಶಾ ಶರ್ಮಾ, ಪಾರ್ಥಸಾರಥಿ, ರಕ್ಷಿತ್ ಶ್ರೀನಿವಾಸನ್ ಹಾಗೂ ರಂಗನಾಯಕಿ ತಲಾ ಆರು ಪಾಯಿಂಟ್ ಗಳಿಸಿದ್ದಾರೆ. ಭಾನುವಾರ ಕೊನೆಯ ದಿನವಾಗಿದ್ದು ಎರಡು ಸುತ್ತುಗಳು ಬಾಕಿ ಇವೆ. ಅಗ್ರ ನಾಲ್ಕು ಸ್ಥಾನ ಗಳಿಸುವವರು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಅರ್ಹತೆ ಗಳಿಸಲಿದ್ದಾರೆ.

ADVERTISEMENT

ಏಳನೇ ಸುತ್ತಿನ ಫಲಿತಾಂಶಗಳು

ಶರಣ್ ರಾವ್‌ಗೆ ಸಂಜಯ್ ಎನ್ ವಿರುದ್ಧ ಜಯ; ಓಜಸ್ ಕುಲಕರ್ಣಿಗೆ ಇಶಾ ಶರ್ಮಾ ಎದುರು ಗೆಲುವು; ಪ್ರಚುರ ಪಿ.‍ಪಿಗೆ ದಿಲೀಪ್ ಕುಮಾರ್ ವಿರುದ್ಧ, ಬಾಲಕಿಶನ್‌ಗೆ ಅಪೂರ್ವಾ ಕಾಂಬ್ಳೆ ವಿರುದ್ಧ, ‍‍‍ಪಾರ್ಥಸಾರಥಿಗೆ ಪ್ರಣಯ್ ಸಿಂಗ್ ವಿರುದ್ಧ, ರಕ್ಷಿತ್ ಶ್ರೀನಿವಾಸನ್‌ಗೆ ಅದ್ವೈತ್ ರತ್ನಾಕರ್ ಎದುರು ಜಯ.‌

ದ್ರಿಕ್ಷು ವಸಂತ್ ಮತ್ತು ಸುದರ್ಶನ್ ಭಟ್‌ ನಡುವಿನ ಪಂದ್ಯ ಡ್ರಾ; ರಂಗನಾಯಕಿಗೆ ಶಾನ್ ಡಿಯಾನ್ ಎದುರು ಗೆಲುವು; ತೇಜಸ್ ಸುರೇಶ್‌ ಮತ್ತು ಮಿಥುಲ್ ಕೆ.ಎಚ್ ನಡುವಿನ ಪಂದ್ಯ ಡ್ರಾ; ವಿವೇಕ್ ನಂಬಿಯಾರ್‌ಗೆ ತೇಜಸ್ ಕುಮಾರ್ ವಿರುದ್ಧ ಜಯ; ಸುಜಯ್ ಬಿ.ಎಂ ಮತ್ತು ದೇವಾಂಶ್ ಚೌಧರಿ ನಡುವಿನ ಪಂದ್ಯ ಡ್ರಾ; ಅರವಿಂದ ರಾಮನಾಥ ಅಯ್ಯರ್‌ಗೆ ಲಯುಕ್ತಿ ವಿ.ಎಸ್‌ ವಿರುದ್ಧ, ಹರ್ಷಿಣಿಗೆ ಗೋಪಾಲ್ ಅಯ್ಯಂಗಾರ್ ಎದುರು, ದರ್ಶನ್ ವಿ.ಪಿ.ಎಸ್‌ಗೆ ಶ್ರೀರಾಂ ಎದುರು, ನಿಶಾಂತ್ ಡಿ ಸೋಜಾಗೆ ನಿಶಾ ಪೇಟ್ಕರ್ ಎದುರು ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.