ADVERTISEMENT

ಬ್ಯಾಡ್ಮಿಂಟನ್‌: ಶಿಖಾ–ಅಶ್ಚಿನಿ ಫೈನಲ್‌ಗೆ

ಪಿಟಿಐ
Published 27 ಡಿಸೆಂಬರ್ 2025, 22:28 IST
Last Updated 27 ಡಿಸೆಂಬರ್ 2025, 22:28 IST
   

ವಿಜಯವಾಡ: ಕರ್ನಾಟಕದ ಜೋಡಿ ಶಿಖಾ ಗೌತಮ್ ಮತ್ತು ಅಶ್ವಿನಿ ಭಟ್ ಕೆ. ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದರು.

ಶನಿವಾರ ನಡೆದ ಸೆಮಿಫೈನಲ್‌ ನಲ್ಲಿ ಮಾಜಿ ಚಾಂಪಿಯನ್‌ ಶಿಖಾ– ಅಶ್ವಿನಿ ಜೋಡಿಯು 21-11, 21-15ರಿಂದ ವೆನ್ನಲಾ ಕೆ. ಮತ್ತು ರಿಷಿಕಾ ಯು. ಜೋಡಿಯನ್ನು ಹಿಮ್ಮೆಟ್ಟಿಸಿತು.  ಪ್ರಶಸ್ತಿ ಸುತ್ತಿನಲ್ಲಿ ಪ್ರಿಯಾ ದೇವಿ ಮತ್ತು ಶ್ರುತಿ ಮಿಶ್ರಾ ಜೋಡಿಯನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸೂರ್ಯ ಚರಿಷ್ಮಾ ತಮಿರಿ ಮತ್ತು ತನ್ವಿ ಪಾತ್ರಿ ಪ್ರಶಸ್ತಿಗಾಗಿ ಪೈಪೋಟಿ ನಡೆಸುವರು. ಪುರುಷರ ಸಿಂಗಲ್ಸ್‌ನಲ್ಲಿ ರಿತ್ವಿಕ್‌ ಸಂಜೀವಿ ಮತ್ತು ಭರತ್‌ ರಾಘವ್‌
ಮುಖಾಮುಖಿಯಾಗುವರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.