ADVERTISEMENT

ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್‌ ಟೂರ್ನಿ: ಶಿವ ಥಾಪಾಗೆ ಚಿನ್ನದ ಗರಿ

ಪಿಟಿಐ
Published 20 ಜುಲೈ 2019, 19:36 IST
Last Updated 20 ಜುಲೈ 2019, 19:36 IST
ಚಿನ್ನ ಗೆದ್ದ ಥಾಪಾ ಸಂಭ್ರಮ–ಪಿಟಿಐ ಚಿತ್ರ
ಚಿನ್ನ ಗೆದ್ದ ಥಾಪಾ ಸಂಭ್ರಮ–ಪಿಟಿಐ ಚಿತ್ರ   

ನವದೆಹಲಿ: ಭಾರತದ ಶವ ಥಾಪಾ, ಶನಿವಾರ ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್‌ ಟೂರ್ನಿಯ 63 ಕೆಜಿ ವಿಭಾಗದ ಚಾಂಪಿಯನ್‌ ಆದರು. ಕಜಕಸ್ತಾನದ ಅಸ್ತಾನದಲ್ಲಿ ನಡೆ ಯುತ್ತಿರುವ ಟೂರ್ನಿಯ ಫೈನಲ್‌ ಪಂದ್ಯ ದಲ್ಲಿ ಅವರಿಗೆ ವಾಕ್‌ಓವರ್‌ ಸಿಕ್ಕಿತು. ಟೂರ್ನಿಯಲ್ಲಿ ಚಿನ್ನ ಗೆದ್ದಭಾರತದ ಮೊದಲ ಬಾಕ್ಸರ್‌ ಎಂಬ ಶ್ರೇಯ ಅವರದಾಯಿತು.

ಅಂತಿಮ ಪಂದ್ಯದಲ್ಲಿ ಥಾಪಾ ಸ್ಥಳೀಯ ಆಟಗಾರ ಜಾಕೀರ್‌ ಸಫಿ ವುಲ್ಲಿನ್‌ ಅವರನ್ನು ಎದುರಿಸಬೇಕಿತ್ತು. ಆದರೆ ಗಾಯದ ಹಿನ್ನೆಲೆಯಲ್ಲಿ ಎದುರಾಳಿ ಪಂದ್ಯದಿಂದ ಹಿಂದೆ ಸರಿದರು.

ಈ ವರ್ಷದ ಆರಂಭದಲ್ಲಿ ನಡೆದ ಏಷ್ಯಾ ಚಾಂಪಿಯನ್‌ಷಿಪ್ ಸೆಮಿಫೈನಲ್‌ ನಲ್ಲಿ ಸಫಿವುಲ್ಲಿನ್‌ ಎದುರು ಥಾಪಾ ಸೋಲು ಕಂಡಿದ್ದರು.

ADVERTISEMENT

ಟೂರ್ನಿಯ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಫೈನಲ್‌ ಪಂದ್ಯದಲ್ಲಿ ಭಾರತದ ಪರ್ವೀನ್‌ ಅವರು ಸ್ಥಳೀಯ ಆಟಗಾರ್ತಿ ರಿಮ್ಮಾ ವೊಲೊಸೆಂಕೊ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಸ್ವೀಟಿ ಬೂರಾ (81 ಕೆಜಿ), ದುರ್ಯೋಧನ ಸಿಂಗ್‌ ನೇಗಿ (69 ಕೆಜಿ) ಸೋಲು ಕಾಣುವ ಮೂಲಕ ಕಂಚಿನ ಪದಕಗಳಿಗೆ ತೃಪ್ತಿಪಟ್ಟರು.

ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಗೆ ಆಯ್ಕೆಯಾಗಲು ಶಿವ ಥಾಪಾ ವಿಫಲವಾಗಿದ್ದಾರೆ. ಆಯ್ಕೆ ಟ್ರಯಲ್ಸ್‌ನಲ್ಲಿ ಅವರು ಮನೀಷ್‌ ಕೌಶಿಕ್‌ ಎದುರು ಮುಗ್ಗರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.