ADVERTISEMENT

ಶೂಟಿಂಗ್‌ ಕೋಚ್‌ಗೆ ಕೋವಿಡ್ ದೃಢ

ಪಿಟಿಐ
Published 30 ಜುಲೈ 2020, 16:52 IST
Last Updated 30 ಜುಲೈ 2020, 16:52 IST
ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ -ಎಎಫ್‌ಪಿ ಚಿತ್ರ
ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ -ಎಎಫ್‌ಪಿ ಚಿತ್ರ   

ನವದೆಹಲಿ: ಇಲ್ಲಿನ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನ ಕೋಚ್‌ ಒಬ್ಬರಿಗೆ ಕೋವಿಡ್–19 ಇರುವುದು ದೃಢಪಟ್ಟಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಅಧಿಕಾರಿಗಳು ತಿಳಿಸಿದ್ದಾರೆ. ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಶೂಟರ್‌ಗಳಿಗೆ ಆಗಸ್ಟ್ ಒಂದರಿಂದ ಇಲ್ಲಿ ತರಬೇತಿ ನಡೆಯಲಿರುವುದರಿಂದ ರೇಂಜ್ ಮುಚ್ಚುವ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ –19 ದೃಢಪಟ್ಟಿರುವುದಾಗಿ ಮಹಿಳಾ ಕೋಚ್ ತಿಳಿಸಿದ್ದಾರೆ. ಆದರೆ ಅವರು ಇಲ್ಲಿ ಯಾರ ಸಂಪರ್ಕಕ್ಕೂ ಬಾರದ ಕಾರಣ ಒಲಿಂಪಿಕ್ಸ್‌ಗೆ ಆಯ್ಕೆಯಾದವರಿಗೆ ತರಬೇತಿ ನಿಗದಿಯಂತೆ ಆರಂಭವಾಗಲಿದೆ. ಕರ್ಣಿ ಸಿಂಗ್‌ ರೇಂಜ್‌ ಜುಲೈ ಎಂಟರಂದು ತೆರೆಯಲಾಗಿತ್ತು. ಕೋವಿಡ್ ದೃಢಪಟ್ಟಿರುವ ಕೋಚ್ ಜುಲೈ 24ರಂದು ಶೂಟಿಂಗ್ ಕೇಂದ್ರದ ಆಡಳಿತ ವಿಭಾಗಕ್ಕೆ ಭೇಟಿ ನೀಡಿದ್ದು ರೇಂಜ್‌ಗೆ ತೆರಳಲಿಲ್ಲ. ಯಾವ ಕ್ರೀಡಾಪಟುಗಳ ಜೊತೆ ಮಾತನಾಡಿಯೂ ಇಲ್ಲ. ಆದರೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಕೇಂದ್ರವನ್ನು ಪೂರ್ತಿ ಸ್ಯಾನಿಟೈಜ್ ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

15 ಶೂಟರ್‌ಗಳು ಒಳಗೊಂಡಂತೆ ಒಲಿಂಪಿಕ್ಸ್‌ಗೆ ತೆರಳುವ 34 ಮಂದಿಯ ತರಬೇತಿಗೆ ಹಾಜರಾತಿ ಕಡ್ಡಾಯಗೊಳಿಸಿ ಈ ಹಿಂದೆ ರಾಷ್ಟ್ರೀಯ ರೈಫಲ್ ಸಂಸ್ಥೆ ಆದೇಶ ಹೊರಡಿಸಿತ್ತು. ಮಾಜಿ ರಾಷ್ಟ್ರೀಯ ಶೂಟರ್ ರೋನಕ್ ಪಂಡಿತ್ ಅವರನ್ನು ಹೈ ಪರ್ಫಾರ್ಮೆನ್ಸ್ ಮ್ಯಾನೇಜರ್ ಆಗಿ ಸಂಸ್ಥೆ ನೇಮಕ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.