ಶೂಟಿಂಗ್
ನಿಂಗ್ಬೊ (ಚೀನಾ): ಭಾರತದ 24 ಶೂಟರ್‌ಗಳ ತಂಡವು ಇಲ್ಲಿ ಮಂಗಳವಾರ ಆರಂಭವಾಗಲಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿಯಲಿದೆ.
ನಿಂಗ್ಬೊ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಕೂಟದ ಮೊದಲ ದಿನ ರೈಫಲ್ ಮತ್ತು ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳು ನಡೆಯಲಿವೆ.
ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಒಲಿಂಪಿಯನ್ ರಮಿತಾ ಜಿಂದಾಲ್ ಅವರು ಉಮಾಮಹೇಶ್ ಮದ್ದಿನೇನಿ ಅವರಿಗೆ ಜೋಡಿಯಾಗಿದ್ದಾರೆ. ದಿವ್ಯಾಂಶ್ ಸಿಂಗ್ ಪನ್ವರ್ ಅವರಿಗೆ ಮೇಘನಾ ಎಂ ಸಜ್ಜನರ್
ಜೊತೆಗಾರರಾಗಿದ್ದಾರೆ.
ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಒಲಿಂಪಿಯನ್ ರಿದಮ್ ಸಾಂಗ್ವಾನ್ ಅವರು ನಿಶಾಂತ್ ರಾವತ್ ಅವರೊಂದಿಗೆ ಮತ್ತು ಅಮಿತ್ ಶರ್ಮಾ ಅವರು ಸುರಭಿ ರಾವ್ ಅವರೊಂದಿಗೆ ಕಣಕ್ಕೆ ಇಳಿಯುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.